ADVERTISEMENT

‘ಗ್ರಾಹಕರ ಅಭಿರುಚಿಗೆ ತಕ್ಕ ಸೆರಾಮಿಕ್ಸ್‌ ಉತ್ಪನ್ನ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 19:30 IST
Last Updated 31 ಜುಲೈ 2018, 19:30 IST
ಅಭಿಷೇಕ್‌ ಸೊಮಾನಿ
ಅಭಿಷೇಕ್‌ ಸೊಮಾನಿ   

‘ಭಾರತದಲ್ಲಿ ಸ್ಯಾನಿಟರಿವೇರ್‌ ಮತ್ತು ಸೆರಾಮಿಕ್ಸ್‌ ಉದ್ಯಮದಲ್ಲಿಅಸಂಘಟಿತ ವಲಯದ ಪಾಲೇ ಹೆಚ್ಚಿಗೆ ಇದೆ. ಹೀಗಾಗಿ ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಬ್ರ್ಯಾಂಡ್‌ ಮೌಲ್ಯ ಕಾಪಾಡಿಕೊಳ್ಳುವುದು ಅಗತ್ಯ’ ಎನ್ನುವುದು ಸೋಮಾನಿ ಸೆರಾಮಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್‌ ಸೊಮಾನಿ ಅವರ ಅಭಿಪ್ರಾಯ.

ಗ್ರಾಹಕರು ಸದಾ ಹೊಸತನ್ನು ಬಯಸುತ್ತಾರೆ. ಮಲಗುವ ಕೋಣೆ, ಓದುವ ಕೋಣೆಯಷ್ಟೇ ಅಲ್ಲದೆ ಸ್ನಾನದ ಮನೆಯೂ ಅಂದವಾಗಿ ಕಾಣಬೇಕು ಎಂದು ಬಹಳಷ್ಟು ಜನರು ಬಯಸುತ್ತಾರೆ. ಸ್ನಾನದ ಕೋಣೆಯ ಕಲ್ಪನೆಯೇ ಬದಲಾಗಿದೆ.ಅದು ಹೆಚ್ಚು ಆಕರ್ಷಕವಾಗಿರಬೇಕು. ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಇರಬೇಕು ಎನ್ನುವ ಕಾರಣಕ್ಕೆವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸುವುದಕ್ಕೆ ಗಮನ ನೀಡಲಾಗುತ್ತಿದೆ.

ಸ್ನಾನದ ಕೋಣೆಗೆ ಬಳಸುವ ಟೈಲ್ಸ್‌, ಅದರ ವಿನ್ಯಾಸ,ಬಾತ್‌ ಟಬ್‌, ನಲ್ಲಿ ಹೀಗೆ ಪ್ರತಿಯೊಂದೂ ವಿಶೇಷವಾಗಿ, ಆಕರ್ಷಕವಾಗಿರಬೇಕು ಎಂದು ಗ್ರಾಹಕರು ಬಯಸುತ್ತಿದ್ದಾರೆ.ಹೀಗಾಗಿ ಕಾಲಕಾಲಕ್ಕೆ ಬದಲಾಗುವ ಅವಸರ ಅಭಿರುಚಿಗೆ ಅನುಗುಣವಾದ ಉತ್ಪನ್ನಗಳನ್ನು ನೀಡುವುದು ಉದ್ಯಮದ ಸವಾಲು.

ADVERTISEMENT

ಗುಣಮಟ್ಟ ಮತ್ತು ಹೊಸ ವಿನ್ಯಾಸಗಳನ್ನು ಪರಿಚಯಿಸುವುದಕ್ಕೆ ’ಸೊಮಾನಿ’ ಜನಪ್ರಿಯವಾಗಿದೆ.ಬ್ರ್ಯಾಂಡ್‌ ಮೌಲ್ಯ ವೃದ್ಧಿಸುವುದನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ, ವಿಶೇಷ ವಿನ್ಯಾಸದ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ಮರದ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ದೀರ್ಘ ಬಾಳಿಕೆಯನ್ನು ಗಮನದಲ್ಲಿ ಇಟ್ಟುಕೊಂಡುನೋಡಲು ಮರದ ಹಲಗೆಯಂತೆ ಕಾಣುವ ಟೈಲ್ಸ್‌ಗಳನ್ನು ತಯಾರಿಸಿದ್ದೇವೆ. ಇದು ವುಡನ್‌ ಫ್ಲೋರಿಂಗ್‌ ಅಥವಾ ವುಡ್‌ ಫಿನಿಶ್‌ ವಾಲ್‌ಗಳಂತೆಯೇ ಕಾಣುತ್ತದೆ.

ತಂತ್ರಜ್ಞಾನ ಅಳವಡಿಕೆಯು ಉದ್ಯಮಕ್ಕೆ ಹೊಸ ಆಯಾಮ ನೀಡಿದೆ. ಉತ್ಪನ್ನಗಳ ವಿನ್ಯಾಸದಲ್ಲಿ ಸ್ಥಿತ್ಯಂತರಕ್ಕೆ ಕಾರಣವಾಗಿದೆ.ಸಣ್ಣ ಟೈಲ್ಸ್‌ಗಳಿಂದ ಅತ್ಯಂತ ದೊಡ್ಡ ಅಂದರೆ 1,200X600ಎಂಎಂ ಗಾತ್ರದ ಟೈಲ್ಸ್‌ಗಳನ್ನೂ ಮಾಡಲು ಅನುಕೂಲವಾಗಿದೆ.

ಈ ಉತ್ಪನ್ನಗಳು ದೀರ್ಘ ಅವಧಿಯವರೆಗೆ ಬಾಳಿಕ ಬರಲಿವೆ. ಸಾಮಾನ್ಯವಾಗಿ ಗ್ರಾಹಕರು ಕನಿಷ್ಠ 5 ರಿಂದ 7 ವರ್ಷಗಳ ಬಳಿಕ ಉತ್ಪನ್ನಗಳನ್ನು ಬದಲಾಯಿಸುತ್ತಾರೆ.ಹೀಗಾಗಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಉತ್ಪನ್ನಗಳ ಬಾಳಿಕೆ ಮತ್ತು ವಿನ್ಯಾಸಕ್ಕೆ ಆದ್ಯತೆ ನೀಡುವುದು ಅಗತ್ಯ. ಬದಲಾಗುವ ಗ್ರಾಹಕರ ಅಭಿರುಚಿಗಳನ್ನು ಆಧರಿಸಿಯೂ ನಮ್ಮ ಉತ್ಪನ್ನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮನೆ ಸ್ವಂತದ್ದೇ ಇರಲಿ ಅಥವಾ ಬಾಡಿಗೆ ಮನೆಯಲ್ಲಿ ಬಳಸುವುದಾದರೂ ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಉತ್ಪನ್ನಗಳ ಬಗ್ಗೆ ಜನರು ಹೆಚ್ಚು ಗಮನ ನೀಡುತ್ತಿದ್ದಾರೆ. ಇದಕ್ಕಾಗಿ ನಾವು ಸಜ್ಜಾಗಿದ್ದೇವೆ.

ಭಾರತದಲ್ಲಿ ಸ್ನಾನಗೃಹ ಉದ್ಯಮವು ಉತ್ತಮ ಪ್ರಗತಿ ಸಾಧಿಸುತ್ತಿದ್ದು, ₹ 25 ಸಾವಿರ ಕೋಟಿ ಮೊತ್ತದ ವಹಿವಾಟು ನಡೆಸುತ್ತಿದೆ. 2017–18ರಲ್ಲಿ ಸೊಮಾನಿ ಸೆರಾಮಿಕ್ಸ್‌ ₹ 1,708 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದೆ.

‘ಕರ್ನಾಟಕದಲ್ಲಿ ಬೆಂಗಳೂರು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಹೀಗಾಗಿಯೇ ಎರಡು ಗ್ರ್ಯಾಂಡೆ ಮತ್ತು ಬೆಂಗಳೂರಿನಲ್ಲಿ ಒಂದು ಎಕ್ಸ್‌ಪೀರಿಯನ್ಸ್‌ ಸ್ಟೋರ್‌ ಹೊಂದಿದ್ದೇವೆ. ಒಂದು ಘಟಕ ನಿರ್ಮಾಣ ಮಾಡುವ ಯೋಜನೆಯೂ ಇದೆ. ರಾಜ್ಯದ ಗ್ರಾಹಕರಿಗೆ ಸುಲಭವಾಗಿ ನಮ್ಮ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿರುತ್ತೇವೆ. ದಕ್ಷಿಣ ಭಾರತದಲ್ಲಿ ಶೀಘ್ರವೇ ಒಂದು ತಯಾರಿಕಾ ಘಟಕ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.