ನವದೆಹಲಿ: ಪರಿಸರಕ್ಕೆ ಪೂರಕವಾಗುವ ಬಗೆಯಲ್ಲಿ ಉಕ್ಕು ಉತ್ಪಾದನೆ ಮಾಡಲು ಕಡಿಮೆ ಪ್ರಮಾಣದ ಇಂಗಾಲ ಹೊರಸೂಸುವ ತಂತ್ರಜ್ಞಾನದ ಬಳಕೆಯು ಅನಿವಾರ್ಯವಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ ಎಂದರು. ಅವರು ಬುಧವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು.
ಪರಿಸರಕ್ಕೆ ಪೂರಕವಾಗುವ ಬಗೆಯಲ್ಲಿ ಉಕ್ಕು ಉತ್ಪಾದಿಸುವುದು ಮತ್ತು ಪರಿಸರ ಪೂರಕವಾದ ತಂತ್ರಜ್ಞಾನದ ಬಳಕೆಯು ಆಯ್ಕೆಯಲ್ಲ, ಅವು ಅನಿವಾರ್ಯ ಎಂದರು. ‘ದೇಶದ ಉಕ್ಕು ಉದ್ಯಮವು 2030ರ ವೇಳೆಗೆ 30 ಕೋಟಿ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಹೊಂದಿದ್ದು, ಅದನ್ನು ತಲುಪುವ ದಿಕ್ಕಿನಲ್ಲಿ ಸಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.