ADVERTISEMENT

ಫೆ.3ರಿಂದ ಸಿಡಿಇಎಲ್‌ ವಹಿವಾಟು ಅಮಾನತು

ಪಿಟಿಐ
Published 13 ಜನವರಿ 2020, 20:00 IST
Last Updated 13 ಜನವರಿ 2020, 20:00 IST

ನವದೆಹಲಿ : ಫೆಬ್ರುವರಿ 3ರಿಂದ ಜಾರಿಗೆ ಬರುವಂತೆಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಐಎಲ್‌), ಸಿಜಿ ಪವರ್ ಮತ್ತು ಇಂಡಸ್ಟ್ರಿಯಲ್‌ ಸಲ್ಯೂಷನ್ಸ್‌ ಕಂಪನಿಗಳ ಷೇರು ವಹಿವಾಟನ್ನು ಅಮಾನತಿನಲ್ಲಿ ಇಡಲಾಗುವುದು ಎಂದು ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳು ತಿಳಿಸಿವೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮದಂತೆ ನೋಂದಾಯಿಸಿಕೊಂಡಿರುವ ಕಂಪನಿಗಳು ತಮ್ಮ ಹಣಕಾಸು ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ,ಈ ಕಂಪನಿಗಳು ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳಿಗೆ‌2019ರ ಜೂನ್‌ ಮತ್ತು ಸೆಪ್ಟೆಂಬರ್ ತ್ರೈಮಾಸಿಕ
ಗಳ ಹಣಕಾಸು ವರದಿಯನ್ನು ಸಲ್ಲಿಸಿಲ್ಲ. ಹೀಗಾಗಿ ಈ ಕ್ರಮ ಕೈಗೊಳ್ಳಳಾಗಿದೆ. ಜನವರಿ 29ರ ಒಳಗಾಗಿ ಹಣಕಾಸು ವರದಿ ಸಲ್ಲಿಸಿದರೆ ಅಮಾನತಿಗೆ ಒಳಗಾಗು
ವುದಿಲ್ಲ ಎಂದು ಷೇರುಪೇಟೆಗಳು ತಿಳಿಸಿವೆ. ಜನವರಿ 10ರಿಂದಲೇ ಪ್ರವರ್ತಕರ ಷೇರುಗಳನ್ನು ಮುಂದಿನ ಆದೇಶದವರೆಗೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದೂ ಹೇಳಿವೆ.

ಷೇರು ಬೆಲೆ ಇಳಿಕೆ: ವಹಿವಾಟಿನಿಂದ ಅಮಾನತುಗೊಳಿಸುವ ಘೋಷಣೆ ಹೊರ
ಬೀಳುತ್ತಿದ್ದಂತೆಯೇ ಈ ಕಂಪನಿಗಳ ಷೇರು ಬೆಲೆ ಶೇ 5ರವರೆಗೂ ಇಳಿಕೆ ಕಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.