ADVERTISEMENT

LPG: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ₹24 ಇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2025, 4:18 IST
Last Updated 1 ಜೂನ್ 2025, 4:18 IST
commercial LPG
commercial LPG   

ನವದೆಹಲಿ: ತೈಲ ಪಂಪನಿಗಳು ವಾಣಿಜ್ಯ ಬಳಕೆಯ 19 ಕೆ.ಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹24 ಕಡಿತ ಮಾಡಿವೆ. ಬೆಲೆ ಕಡಿತದ ಬಳಿಕ ಸಿಲಿಂಡರ್ ಬೆಲೆ ₹1,723 ಆಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ಏಪ್ರಿಲ್ 1 ರಂದು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹41 ಕಡಿತ ಮಾಡಲಾಗಿತ್ತು. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮತ್ತು ಸಮಗ್ರ ಮಾರುಕಟ್ಟೆ ಸ್ಥಿತಿ ಆಧರಿಸಿ ತೈಲ ಕಂಪನಿಗಳು ಕಾಲಕಾಲಕ್ಕೆ ಬೆಲೆ ಪರಿಷ್ಕರಿಸುತ್ತವೆ.

ಗೃಹ ಬಳಕೆ ಅಡುಗೆ ಅನಿಲ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ

ADVERTISEMENT

ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳನ್ನು ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ದೇಶದಲ್ಲಿ ಸುಮಾರು ಶೇ 90ರಷ್ಟು ಎಲ್‌ಪಿಜಿಯ ಗೃಹೋಪಯೋಗಕ್ಕೆ ಬಳಸಲಾಗುತ್ತದೆ. ಉಳಿದ ಶೇ 10ರಷ್ಟನ್ನು ವಾಣಿಜ್ಯ, ಕೈಗಾರಿಕೆ ಮತ್ತು ವಾಹನಗಳಲ್ಲಿ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.