ಬೆಂಗಳೂರು:ಜೆಮಿನಿ ಎಡಿಬಲ್ಸ್ ಆ್ಯಂಡ್ ಫ್ಯಾಟ್ಸ್ ಇಂಡಿಯಾದ ಮುಂಚೂಣಿ ಖಾದ್ಯ ತೈಲ ಬ್ರ್ಯಾಂಡ್ ಆಗಿರುವ ‘ಫ್ರೀಡಂ’ ರಿಫೈನ್ಡ್ ಸೂರ್ಯಕಾಂತಿಯ ಹೊಸ ಶ್ರೇಣಿ ಲೈಟ್ ಆ್ಯಂಡ್ ಬ್ರೈಟ್ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಗ್ರಾಹಕರಿಗೆ ಉತ್ತೇಜನಾ ಕೊಡುಗೆ ರೂಪದಲ್ಲಿ ₹ 10 ಬೆಲೆಯ ಒಂದು ಸ್ಕಾಚ್ ಬ್ರೈಟ್ (ಸ್ಕ್ರಬ್ ಪ್ಯಾಡ್) ಅನ್ನು ಉಚಿತವಾಗಿ ನೀಡುವ ಕೊಡುಗೆ ಘೋಷಿಸಲಾಗಿದೆ.
‘ಪ್ರತಿ 1 ಲೀಟರ್ ಫ್ರೀಡಂ ರಿಫೈನ್ಡ್ ಸನ್ಫ್ಲವರ್ ತೈಲದ ಪೌಚ್ ಅಥವಾ ಬಾಟಲಿ ಜತೆ ಗ್ರಾಹಕರಿಗೆ ಈ ಕೊಡುಗೆ ನೀಡಲಾಗುವುದು. ‘ಫ್ರೀಡಂ’, ಸೂರ್ಯಕಾಂತಿ ಖಾದ್ಯ ತೈಲ ವಿಭಾಗದಲ್ಲಿ ದಕ್ಷಿಣ ಭಾರತದ ಮುಂಚೂಣಿ ಬ್ರ್ಯಾಂಡ್ ಆಗಿದೆ’ ಎಂದು ಸಂಸ್ಥೆಯ ಮಾರಾಟ ವಿಭಾಗದ ಉಪಾಧ್ಯಕ್ಷ ಚಂದ್ರಶೇಖರ್ ರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.