ನವದೆಹಲಿ: ದೇಶದ ಪ್ರಮುಖ ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆ ಜೂನ್ ತಿಂಗಳಿನಲ್ಲಿ ಶೇ 1.7ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಇದೇ ವರ್ಷದ ಮೇ ತಿಂಗಳಲ್ಲಿ ಈ ವಲಯಗಳ ಬೆಳವಣಿಗೆಯು ಶೇ 1.2ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಬೆಳವಣಿಗೆ ಸ್ವಲ್ಪ ಏರಿಕೆಯಾಗಿದೆ. ಆದರೆ, ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಬೆಳವಣಿಗೆ ಶೇ 5ರಷ್ಟಿದ್ದು, ಅದಕ್ಕೆ ಹೋಲಿಸಿದರೆ ಪ್ರಗತಿ ಇಳಿಕೆಯಾಗಿದೆ.
ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಸಗೊಬ್ಬರ ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಆದರೆ, ರಿಫೈನರಿ ಉತ್ಪನ್ನಗಳು (ಶೇ 3.4), ಉಕ್ಕು (ಶೇ 9.3) ಮತ್ತು ಸಿಮೆಂಟ್ ವಲಯದ ಉತ್ಪಾದನೆ ಶೇ 9.2ರಷ್ಟು ಏರಿಕೆ ಕಂಡಿದೆ.
ಕಳೆದ ವರ್ಷದ ಜೂನ್ ತ್ರೈಮಾಸಿಕದಲ್ಲಿ ಈ ಎಂಟು ವಲಯಗಳ ಬೆಳವಣಿಗೆ ಶೇ 6.2ರಷ್ಟಿತ್ತು. ಈ ಬಾರಿ ಶೇ 1.3ರಷ್ಟಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ 6.8ರಷ್ಟು ಇಳಿಕೆಯಾಗಿದೆ. ಕಚ್ಚಾ ತೈಲ (ಶೇ 1.2) ನೈಸರ್ಗಿಕ ಅನಿಲ (ಶೇ 2.8) ರಸಗೊಬ್ಬರ (ಶೇ 1.2) ಮತ್ತು ವಿದ್ಯುತ್ ಉತ್ಪಾದನೆ ಶೇ 2.8ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.