ADVERTISEMENT

ಪ್ರಮುಖ ವಲಯಗಳಲ್ಲಿ ಶೇ 12.7ರಷ್ಟು ಬೆಳವಣಿಗೆ

ಪಿಟಿಐ
Published 29 ಜುಲೈ 2022, 15:38 IST
Last Updated 29 ಜುಲೈ 2022, 15:38 IST

ನವದೆಹಲಿ: ದೇಶದ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳು ಜೂನ್ ತಿಂಗಳಿನಲ್ಲಿ ಶೇಕಡ 12.7ರಷ್ಟು ಬೆಳವಣಿಗೆ ದಾಖಲಿಸಿವೆ. ಬೆಳವಣಿಗೆ ಪ್ರಮಾಣವು ಹಿಂದಿನ ವರ್ಷದ ಜೂನ್‌ನಲ್ಲಿ ಶೇ 9.4ರಷ್ಟು ಇತ್ತು.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಘಟಕಗಳ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್‌ ವಲಯಗಳ ಬೆಳವಣಿಗೆ ಪ್ರಮಾಣವು ಮೇ ತಿಂಗಳಿನಲ್ಲಿ ಶೇ 19.3ರಷ್ಟು ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT