ADVERTISEMENT

ಮೂಲಸೌಕರ್ಯ ವಲಯದ ಬೆಳವಣಿಗೆ ಶೇ 4.6ಕ್ಕೆ ಇಳಿಕೆ

ಪಿಟಿಐ
Published 31 ಮಾರ್ಚ್ 2021, 16:41 IST
Last Updated 31 ಮಾರ್ಚ್ 2021, 16:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆಯು ಕಳೆದ ವರ್ಷದ ಫೆಬ್ರುವರಿಗೆ ಹೋಲಿಸಿದರೆ ಈ ವರ್ಷದ ಫೆಬ್ರುವರಿಯಲ್ಲಿ ಇಳಿಕೆ ಕಂಡಿದೆ.

2020ರ ಫೆಬ್ರುವರಿಯಲ್ಲಿ ಈ ವಲಯಗಳ ಬೆಳವಣಿಗೆಯು ಶೇಕಡ 6.4ರಷ್ಟಿತ್ತು. ಇದು 2021ರ ಫೆಬ್ರುವರಿಯಲ್ಲಿ ಶೇ 4.6ಕ್ಕೆ ಇಳಿಕೆ ಆಗಿದ್ದು, ತಜ್ಞರ ಪ್ರಕಾರ ಕಳೆದ ಆರು ತಿಂಗಳಿನಲ್ಲಿ ಕಂಡಿರುವ ಅತ್ಯಂತ ಹೆಚ್ಚಿನ ಇಳಿಕೆ ಇದಾಗಿದೆ.

ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲವನ್ನೂ ಒಳಗೊಂಡು ಎಲ್ಲಾ ವಲಯಗಳ ಉತ್ಪಾದನೆ ಇಳಿಕೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

2020–21ರ ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆ ಶೇ (–) 8.3ಕ್ಕೆ ಕುಸಿತ ಕಂಡಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ (+) 1.3ರಷ್ಟು ಬೆಳವಣಿಗೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.