ADVERTISEMENT

ಕಂಟ್ರಿ ಕ್ಲಬ್‌: ವಿಐಪಿ ಗೋಲ್ಡ್‌ ಮೆಂಬರ್‌ಷಿಪ್‌ ಕಾರ್ಡ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 15:46 IST
Last Updated 21 ಆಗಸ್ಟ್ 2025, 15:46 IST
ಕಂಟ್ರಿ ಕ್ಲಬ್‌ ಹಾಸ್ಪಿಟಾಲಿಟಿ ಆ್ಯಂಡ್ ಹಾಲಿಡೇಸ್ ಲಿಮಿಟೆಡ್‌ನ ‘ವಿಐಪಿ ಗೋಲ್ಡ್‌ ಮೆಂಬರ್‌ಷಿಪ್‌ ಕಾರ್ಡ್‌’ ಅನ್ನು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವೈ.ರಾಜೀವ್ ರೆಡ್ಡಿ ಬಿಡುಗಡೆಗೊಳಿಸಿದರು. ಈ ವೇಳೆ ಕಂಪನಿಯ ಉಪಾಧ್ಯಕ್ಷ ನೀರವ್‌ ಇದ್ದರು 
ಕಂಟ್ರಿ ಕ್ಲಬ್‌ ಹಾಸ್ಪಿಟಾಲಿಟಿ ಆ್ಯಂಡ್ ಹಾಲಿಡೇಸ್ ಲಿಮಿಟೆಡ್‌ನ ‘ವಿಐಪಿ ಗೋಲ್ಡ್‌ ಮೆಂಬರ್‌ಷಿಪ್‌ ಕಾರ್ಡ್‌’ ಅನ್ನು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವೈ.ರಾಜೀವ್ ರೆಡ್ಡಿ ಬಿಡುಗಡೆಗೊಳಿಸಿದರು. ಈ ವೇಳೆ ಕಂಪನಿಯ ಉಪಾಧ್ಯಕ್ಷ ನೀರವ್‌ ಇದ್ದರು    

ಬೆಂಗಳೂರು: ಆತಿಥ್ಯ ಸೇವಾ ಕಂಪನಿ, ಕಂಟ್ರಿ ಕ್ಲಬ್‌ ಹಾಸ್ಪಿಟಾಲಿಟಿ ಆ್ಯಂಡ್ ಹಾಲಿಡೇಸ್ ಲಿಮಿಟೆಡ್‌ (ಸಿಸಿಎಚ್‌ಎಚ್‌ಎಲ್‌) ‘ವಿಐಪಿ ಗೋಲ್ಡ್‌ ಮೆಂಬರ್‌ಷಿಪ್‌ ಕಾರ್ಡ್‌’ ಬಿಡುಗಡೆ ಮಾಡಿದೆ.

ಸಿಕ್ಕಿಂ ರಾಜ್ಯದ ಗ್ಯಾಂಗ್ಟಕ್‌ನಲ್ಲಿ ಹೊಸದಾಗಿ ‘ವ್ಯಾಲಿ ವಿಸ್ಟಾ ರೆಸಾರ್ಟ್‌’ ನಿರ್ಮಿಸಲಾಗಿದೆ. ಇದರೊಂದಿಗೆ ಕಂಪನಿಯ ವಿಲಾಸಿ ರೆಸಾರ್ಟ್‌ಗಳ ಸಂಖ್ಯೆ 51ಕ್ಕೇರಿದೆ. ಗ್ಯಾಂಗ್ಟಕ್‌ನಲ್ಲಿ ಕಂಪನಿಯ ಸೇವೆ ಆರಂಭವಾಗಿರುವುದು ಹಾಗೂ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಈ ಕಾರ್ಡ್ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವೈ.ರಾಜೀವ್ ರೆಡ್ಡಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ವಿಶೇಷ ಸದಸ್ಯತ್ವದ ಮೂಲಕ ಹೊಸ ಸದಸ್ಯರಿಗೆ ಹಾಗೂ ಈಗಾಗಲೇ ಸದಸ್ಯರಾಗಿರುವವರಿಗೆ ಗ್ಯಾಂಗ್ಟಕ್‌ನಲ್ಲಿ 2 ರಾತ್ರಿ, 3 ಹಗಲುಗಳ ವಾಸ್ತವ್ಯದ ಕೊಡುಗೆ ಸೇರಿ ಇನ್ನಿತರ ಸೌಲಭ್ಯಗಳನ್ನು ನೀಡಲಾಗುವುದು ಎಂದರು. 

ADVERTISEMENT

ಮೂರು ದಶಕದಿಂದ ಕಂಪನಿ ಗುಣಮಟ್ಟದ ಆತಿಥ್ಯ ಸೇವೆಯನ್ನು ಪ್ರವಾಸಿಗರಿಗೆ ನೀಡುತ್ತಿದೆ. ಪ್ರಸ್ತುತ 20 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಕಂಟ್ರಿ ಕ್ಲಬ್‌ ಹೊಂದಿದೆ. ಉತ್ತರ ಭಾರತ ಮತ್ತು ಈಶಾನ್ಯ ಭಾರತದ ಮತ್ತಷ್ಟು ಸ್ಥಳಗಳಿಗೆ ವಹಿವಾಟನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.