ADVERTISEMENT

ಕೋವಿಡ್‌ ಚಿಕಿತ್ಸಾ ವೆಚ್ಚ ಭರಿಸುವ ವಿಮೆ ಓಮೈಕ್ರಾನ್‌ಗೂ ಅನ್ವಯ

ಪಿಟಿಐ
Published 3 ಜನವರಿ 2022, 16:19 IST
Last Updated 3 ಜನವರಿ 2022, 16:19 IST

ನವದೆಹಲಿ: ಕೋವಿಡ್‌ ಚಿಕಿತ್ಸಾ ವೆಚ್ಚಗಳನ್ನು ಭರಿಸುವ ಆರೋಗ್ಯ ವಿಮಾ ಯೋಜನೆಗಳು ಓಮೈಕ್ರಾನ್‌ ಸೋಂಕಿನ ಚಿಕಿತ್ಸೆಗೆ ಆಗುವ ವೆಚ್ಚಗಳಿಗೂ ರಕ್ಷಣೆ ನಿಡುತ್ತವೆ ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಸೋಮವಾರ ಸ್ಪಷ್ಟಪಡಿಸಿದೆ.

ಈ ವಿಚಾರವಾಗಿ ಪ್ರಾಧಿಕಾರವು ವಿಮಾ ಕಂಪನಿಗಳಿಗೆ ಸೂಚನೆಗಳನ್ನು ರವಾನಿಸಿದೆ. ವಿಮಾ ಕಂಪನಿಗಳು ತಾವು ಒಪ್ಪಂದ ಮಾಡಿಕೊಂಡಿರುವ ಎಲ್ಲ ಆಸ್ಪತ್ರೆಗಳ ಜೊತೆ ಸಮನ್ವಯ ಸಾಧಿಸಬೇಕು, ವಿಮಾ ಸೌಲಭ್ಯ ಪಡೆದಿರುವವರು ಆಸ್ಪತ್ರೆಗೆ ದಾಖಲಾದರೆ ಅವರಿಗೆ ಯಾವುದೇ ತೊಂದರೆ ಇಲ್ಲದೆ ನಗದುರಹಿತವಾಗಿ ಆರೋಗ್ಯ ಸೇವೆಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಪ್ರಾಧಿಕಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT