(ಚಿತ್ರ ಕೃಪೆ–X/@DoT_India)
ನವದೆಹಲಿ: ಕಳ್ಳತನ ಆಗಿರುವ ಅಥವಾ ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡುವುದಕ್ಕಾಗಿ ದೂರಸಂಪರ್ಕ ಇಲಾಖೆಯು ಶುಕ್ರವಾರ ‘ಸಂಚಾರ್ ಸಾಥಿ’ ಎಂಬ ಹೊಸ ಆ್ಯಪ್ ಅನ್ನು ಪರಿಚಯಿಸಿದೆ.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ಗಳಿಗೆ ಈ ಆ್ಯಪ್ ಲಭ್ಯವಾಗಲಿದೆ.
ವಂಚನೆ ತಡೆ: ಬಳಕೆದಾರರು ಈ ಆ್ಯಪ್ ಮೂಲಕ ಅನಾಮಧೇಯ ಕರೆಗಳು ಮತ್ತು ಸಂದೇಶಗಳ ಬಗ್ಗೆ ವರದಿ ಮಾಡಬಹುದು. ಇದರಿಂದ ವಂಚನೆ ತಡೆಗಟ್ಟುವುದು ಸುಲಭ
ಫೋನ್ ಬ್ಲಾಕ್/ ಅನ್‌ಲಾಕ್ ವ್ಯವಸ್ಥೆ: ಕಳೆದುಹೋದ ಅಥವಾ ಕಳವಾದ ಫೋನ್ ಅನ್ನು ತಕ್ಷಣವೇ ಬ್ಲಾಕ್ ಮಾಡಿಸಬಹುದು. ಅದು ಪತ್ತೆಯಾದ ಬಳಿಕ ಸುರಕ್ಷಿತವಾಗಿದ್ದರೆ ಮತ್ತೆ ಅನ್‌ಲಾಕ್ ಮಾಡಿಸಬಹುದು
ನೈಜತೆ ಪತ್ತೆ: ನಾಗರಿಕರು ತಮ್ಮ ಹೆಸರಿನಲ್ಲಿ ಪಡೆದಿರುವ ಎಲ್ಲಾ ಮೊಬೈಲ್ ಸಂಪರ್ಕಗಳ ಬಗ್ಗೆ ಇದರಲ್ಲಿ ಪರಿಶೀಲಿಸಬಹುದು. ಅನಧಿಕೃತವಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಅಲ್ಲದೆ, ಬಳಸಿದ ಫೋನ್ ಖರೀದಿಸುವ ಮೊದಲು ಅದರ ಅಸಲಿತನದ ಪರೀಕ್ಷೆಗೂ ಅವಕಾಶವಿದೆ
ನೋ ಯುವರ್ ಮೊಬೈಲ್: ಗ್ರಾಹಕರು ಈ ಸೌಲಭ್ಯ ಬಳಸಿಕೊಂಡು ತಾವು ಖರೀದಿಸುವ ಸೆಕೆಂಡ್‌ಹ್ಯಾಂಡ್ ಫೋನ್ ಕಳ್ಳತನದ ಮೂಲಕ ತಮ್ಮ ಕೈಸೇರುತ್ತಿದೆಯೇ ಎಂಬ ಬಗ್ಗೆ ಪರೀಕ್ಷಿಸಿಕೊಳ್ಳಬಹುದಾಗಿದೆ
ದೇಶದಲ್ಲಿ 90 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.