ADVERTISEMENT

ಅಂಧರಿಗೆ ಕರೆನ್ಸಿ ಗುರುತಿಸಲು ಆ್ಯಪ್‌: ಬಿಡ್‌ ಕರೆದ ಆರ್‌ಬಿಐ

ಪಿಟಿಐ
Published 14 ಜುಲೈ 2019, 18:50 IST
Last Updated 14 ಜುಲೈ 2019, 18:50 IST
   

ನವದೆಹಲಿ: ಅಂಧರು ಕರೆನ್ಸಿ ನೋಟುಗಳನ್ನು ಸುಲಭವಾಗಿ ಗುರುತಿಸಲು ನೆರವಾಗುವ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲು ಆರ್‌ಬಿಐ ಬಿಡ್‌ ಕರೆದಿದೆ.

ದೇಶದಲ್ಲಿರುವ ಒಟ್ಟಾರೆ 80 ಲಕ್ಷ ಅಂಧರಿಗೆ ಈ ಆ್ಯಪ್‌ನಿಂದ ಪ್ರಯೋಜನವಾಗಲಿದೆ ಎಂದು ಹೇಳಿದೆ.ಮೊಬೈಲ್‌ ಕ್ಯಾಮೆರಾ ಎದುರು ಇಡುವ ನೋಟಿನ ಚಿತ್ರವನ್ನು ಸೆರೆಹಿಡಿದು ಅದರ ಮುಖಬೆಲೆಯನ್ನು ಗುರುತಿಸುವಂತೆ ಆ್ಯಪ್‌ ಅಭಿವೃದ್ಧಿಪಡಿಸಬೇಕಿದೆ.

ನೋಟಿನ ಚಿತ್ರ ಸ್ಪಷ್ಟವಾಗಿ ಸೆರೆಯಾದರೆ, ಧ್ವನಿಯ ಮೂಲಕವೂ ಅದು ಯಾವ ಮುಖಬೆಲೆಯ ಕರೆನ್ಸಿ ಎನ್ನುವುದನ್ನು ತಿಳಿಸುವಂತಿರಬೇಕು. ಚಿತ್ರ ಸರಿಯಾಗಿ ಸೆರೆಯಾಗದೇ ಇದ್ದರೆ, ಸ್ಪಷ್ಟವಾಗಿ ತೆಗೆಯುವಂತೆ ಸೂಚನೆ ನೀಡುವಂತಿರಬೇಕು ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.