ನವದೆಹಲಿ: ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ವಾರ್ಷಿಕ 60 ಲಕ್ಷ ಟನ್ ಸಿಮೆಂಟ್ ತಯಾರಿಕೆ ಸಂಬಂಧ ಈ ಎರಡು ರಾಜ್ಯಗಳಲ್ಲಿ ₹3,520 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಸಿಮೆಂಟ್ ತಯಾರಿಕಾ ಕಂಪನಿಯಾದ ದಾಲ್ಮಿಯಾ ಭಾರತ್ ತಿಳಿಸಿದೆ.
ಕರ್ನಾಟಕದ ಬೆಳಗಾವಿಯಲ್ಲಿರುವ ತನ್ನ ಘಟಕದಲ್ಲಿ ಸಿಮೆಂಟ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಮಹಾರಾಷ್ಟ್ರದ ಪುಣೆ ಘಟಕದಲ್ಲೂ ಉತ್ಪಾದನೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದೆ.
ಸಾಲ ಹಾಗೂ ಕಂಪನಿಯ ಸ್ವಂತ ಹಣದಿಂದ ಘಟಕಗಳಲ್ಲಿ ಬಂಡವಾಳ ಹೂಡಿಕೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಅಸ್ಸಾಂ ಮತ್ತು ಬಿಹಾರದಲ್ಲಿಯೂ ತನ್ನ ಘಟಕ ವಿಸ್ತರಣೆಗೆ ಕಂಪನಿ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.