ADVERTISEMENT

ಡೆಟ್‌ ಫ‍ಂಡ್‌: 2022ರಲ್ಲಿ ₹ 2.3 ಲಕ್ಷ ಕೋಟಿ ಹೊರಹರಿವು

ಪಿಟಿಐ
Published 12 ಜನವರಿ 2023, 13:14 IST
Last Updated 12 ಜನವರಿ 2023, 13:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಬಡ್ಡಿದರ ಹೆಚ್ಚಳ ಮತ್ತು ಈಕ್ವಿಟಿಯಲ್ಲಿ ಉತ್ತಮ ಗಳಿಕೆ ಸಿಗುತ್ತಿರುವ ಕಾರಣಗಳಿಂದಾಗಿ 2022ರಲ್ಲಿ ಡೆಟ್‌ ಮ್ಯೂಚುವಲ್ ಫಂಡ್‌ಗಳಿಂದ ₹ 2.3 ಲಕ್ಷ ಕೋಟಿ ಬಂಡವಾಳ ಹೊರಹೋಗಿದೆ.

2021ರಲ್ಲಿ ₹ 34,545 ಕೋಟಿ ಬಂಡವಾಳ ಹೊರಹೋಗಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಹೇಳಿದೆ.

2022ರ 12 ತಿಂಗಳಿನಲ್ಲಿ 5 ತಿಂಗಳು ಬಂಡವಾಳ ಹೊರಹರಿವು ಆಗಿದೆ. ಅದರಲ್ಲಿಯೂ ಮುಖ್ಯವಾಗಿ ಮಾರ್ಚ್‌ನಲ್ಲಿ ₹ 1.14 ಲಕ್ಷ ಕೋಟಿ ಮತ್ತು ಜೂನ್‌ನಲ್ಲಿ ₹ 92,248 ಕೋಟಿ ಬಂಡವಾಳ ಹಿಂತೆಗೆತ ಆಗಿದೆ.

ADVERTISEMENT

ಡೆಟ್‌ ಫಂಡ್‌ಗಳಿಗೆ 2022ನೇ ವರ್ಷವು ಸವಾಲಿನಿಂದ ಕೂಡಿತ್ತು. ಆದರೆ, 2023ರಲ್ಲಿ ಬಡ್ಡಿದರ ಹೆಚ್ಚಳ ಪ್ರಮಾಣ ಕಡಿಮೆ ಆಗುವ ಸೂಚನೆ ಇರುವುದರಿಂದ ಡೆಟ್‌ ಫಂಡ್‌ಗಳಲ್ಲಿ ಮತ್ತೆ ಬಂಡವಾಳ ಹೂಡಿಕೆ ಆಗುವ ಸಾಧ್ಯತೆ ಇದೆ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಹಿರಿಯ ವಿಶ್ಲೇಷಕಿ ಕವಿತಾ ಕೃಷ್ಣನ್‌ ಹೇಳಿದ್ದಾರೆ.

ಮ್ಯೂಚುವಲ್‌ ಫಂಡ್‌ಗಳ ನಿರ್ವಹಣಾ ಸಂಪತ್ತು ಮೌಲ್ಯವು 2021ರ ಡಿಸೆಂಬರ್‌ನಲ್ಲಿ ₹ 14.05 ಲಕ್ಷ ಕೋಟಿ ಇದ್ದಿದ್ದು 2022ರ ಡಿಸೆಂಬರ್‌ನಲ್ಲಿ ₹ 12.41 ಲಕ್ಷ ಕೋಟಿಗೆ (ಶೇ 11) ಇಳಿಕೆ ಆಗಿದೆ. ಡೆಟ್‌ ಫಂಡ್‌ಗಳಲ್ಲಿ ಖಾತೆಗಳ ಸಂಖ್ಯೆಯು 2021ರ ಡಿಸೆಂಬರ್‌ನಲ್ಲಿ 78.4 ಲಕ್ಷ ಇದ್ದಿದ್ದು 2022ರ ಡಿಸೆಂಬರ್‌ನಲ್ಲಿ 73.38 ಲಕ್ಷಕ್ಕೆ ಇಳಿಕೆ ಕಂಡಿದೆ ಎಂದು ಒಕ್ಕೂಟ ಮಾಹಿತಿ ನೀಡಿದೆ.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ 2022ರಲ್ಲಿ ₹1.6ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.