ADVERTISEMENT

ಡಿಕ್ಯಾತ್‌ಲಾನ್‌: ಭಾರತದಿಂದ ಖರೀದಿ ಹೆಚ್ಚಳ ಗುರಿ

ಪಿಟಿಐ
Published 29 ಜುಲೈ 2025, 13:55 IST
Last Updated 29 ಜುಲೈ 2025, 13:55 IST
ಡಿಕ್ಯಾತ್‌ಲಾನ್ ಮಳಿಗೆ
ಡಿಕ್ಯಾತ್‌ಲಾನ್ ಮಳಿಗೆ   

ನವದೆಹಲಿ: ಕ್ರೀಡೆಯಲ್ಲಿ ಬಳಸುವ ಪರಿಕರಗಳ ರಿಟೇಲ್‌ ವ್ಯಾಪಾರದಲ್ಲಿ ತೊಡಗಿರುವ ಡಿಕ್ಯಾತ್‌ಲಾನ್‌ ತನ್ನ ಜಾಗತಿಕ ವಹಿವಾಟುಗಳಿಗೆ ಭಾರತದಿಂದ ಸರಕುಗಳನ್ನು ಖರೀದಿ ಮಾಡುವುದನ್ನು 2030ಕ್ಕೆ ಮೊದಲು 3 ಬಿಲಿಯನ್ ಅಮೆರಿಕನ್‌ ಡಾಲರ್‌ಗಳಿಗೆ (ಅಂದಾಜು ₹26 ಸಾವಿರ ಕೋಟಿ) ಹೆಚ್ಚು ಮಾಡುವುದಾಗಿ ಮಂಗಳವಾರ ತಿಳಿಸಿದೆ.

ಡಿಕ್ಯಾತ್‌ಲಾನ್‌ ಕಂಪನಿಯು ತನ್ನ ವಹಿವಾಟುಗಳಿಗೆ ಕಳೆದ 25 ವರ್ಷಗಳಿಂದ ಭಾರತದಿಂದ ಸರಕುಗಳನ್ನು ಖರೀದಿಸುತ್ತಿದೆ.

‘ಜಾಗತಿಕ ವಹಿವಾಟುಗಳಿಗೆ ಈಗ ಭಾರತದಿಂದ ತರಿಸಿಕೊಳ್ಳುವ ಸರಕುಗಳ ಪ್ರಮಾಣವು ಶೇ 8ರಷ್ಟಿದೆ. ಇದನ್ನು 2030ರ ವೇಳೆಗೆ ಶೇ 15ಕ್ಕೆ ಹೆಚ್ಚು ಮಾಡುವ ಗುರಿ ಇದೆ’ ಎಂದು ಕಂಪನಿಯು ಹೇಳಿದೆ. ಭಾರತದಲ್ಲಿ ನಡೆಸುವ ವಹಿವಾಟುಗಳಿಗೆ ಕಂಪನಿಯು ಶೇ 70ಕ್ಕೂ ಹೆಚ್ಚಿನ ಸರಕುಗಳನ್ನು ಭಾರತದಲ್ಲೇ ಖರೀದಿಸುತ್ತಿದೆ.

ADVERTISEMENT

ಈ ಪ್ರಮಾಣವು 2030ರ ವೇಳೆಗೆ ಶೇ 90ಕ್ಕೆ ಹೆಚ್ಚಳ ಕಾಣುವ ನಿರೀಕ್ಷೆ ಇದೆ ಎಂದು ಕಂಪನಿಯು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.