ನವದೆಹಲಿ: ಐಷಾರಾಮಿ ಮನೆಗಳನ್ನು ಹೊಂದಿರುವ ಜಗತ್ತಿನ ಪ್ರಮುಖ 100 ನಗರಗಳ ಪಟ್ಟಿಯಲ್ಲಿ ದೆಹಲಿ 18ನೇ ಸ್ಥಾನ ಪಡೆದಿದ್ದರೆ, ಬೆಂಗಳೂರು 40ನೇ ಸ್ಥಾನ ಪಡೆದಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ವರದಿ ಬುಧವಾರ ತಿಳಿಸಿದೆ.
ಜಾಗತಿಕವಾಗಿ ಪ್ರಮುಖ 100 ನಗರಗಳಲ್ಲಿನ ಮನೆಗಳ ವಾರ್ಷಿಕ ಬೆಲೆ ಏರಿಕೆ ಆಧರಿಸಿ ನೈಟ್ ಫ್ರಾಂಕ್ ಪ್ರೈಮ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಇಂಡೆಕ್ಸ್ (ಪಿಪಿಆರ್‌ಐ–100) ‘ಸಂಪತ್ತಿನ ವರದಿ 2025’ ಅನ್ನು ಸಿದ್ಧಪಡಿಸಿದೆ.
2024ರಲ್ಲಿ ಜಾಗತಿಕವಾಗಿ ಶೇ 3.6ರಷ್ಟು ಮನೆಗಳ ಬೆಲೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಶೇ 6.7ರಷ್ಟು ಏರಿಕೆಯಾಗಿದೆ. 2023ರಲ್ಲಿ ದೆಹಲಿ 37ನೇ ಸ್ಥಾನದಲ್ಲಿತ್ತು. ಅದು ಕಳೆದ ವರ್ಷ 18ನೇ ಸ್ಥಾನಕ್ಕೆ ತಲುಪಿದೆ. ಬೆಂಗಳೂರು 59 ಸ್ಥಾನದಿಂದ 40ಕ್ಕೆ ಮುಟ್ಟಿದ್ದರೆ, ಮುಂಬೈ 21ನೇ ಸ್ಥಾನದಲ್ಲಿದೆ. ಸೋಲ್, ಮನಿಲಾ, ದುಬೈ, ರಿಯಾದ್ ಮತ್ತು ಟೋಕಿಯೊ ಮೊದಲ ಐದು ಸ್ಥಾನದಲ್ಲಿವೆ ಎಂದು ತಿಳಿಸಿದೆ.
‘ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕ ಬೆಳವಣಿಗೆ ಮತ್ತು ಐಷಾರಾಮಿ ಮನೆಗಳಿಗೆ ಹೆಚ್ಚಿದ ಬೇಡಿಕೆಯಿಂದ ದರ ಏರಿಕೆಯಾಗಿದೆ’ ಎಂದು ನೈಟ್‌ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.