ADVERTISEMENT

ಹಬ್ಬದ ಬೇಡಿಕೆ ಈಡೇರಿಸಲು 75 ಸಾವಿರ ನೇಮಕ: ಡೆಲಿವರಿ ಕಂಪನಿ

ಪಿಟಿಐ
Published 26 ಆಗಸ್ಟ್ 2022, 11:00 IST
Last Updated 26 ಆಗಸ್ಟ್ 2022, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹಬ್ಬದ ಋತುವಿನ ಬೇಡಿಕೆಯನ್ನು ಈಡೇರಿಸಲು ಮುಂದಿನ ಒಂದೂವರೆ ತಿಂಗಳಲ್ಲಿ 75 ಸಾವಿರಕ್ಕೂ ಅಧಿಕ ಜನರನ್ನು ನೇಮಿಸಿಕೊಳ್ಳುವುದಾಗಿ ಸರಕು ಸಾಗಣೆ ಕ್ಷೇತ್ರದ ಡೆಲಿವರಿ ಕಂಪನಿಯು ಶುಕ್ರವಾರ ತಿಳಿಸಿದೆ.

ಒಟ್ಟು ನೇಮಕದಲ್ಲಿ 10 ಸಾವಿರಕ್ಕೂ ಅಧಿಕ ನೌಕರರು ಡೆಲಿವರಿ ಗೇಟ್‌ವೇಯ್ಸ್‌, ಗೋದಾಮು ಮತ್ತು ಲಾಸ್ಟ್‌ ಮೈಲ್‌ ಡೆಲಿವರಿ ವ್ಯವಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಕಂಪನಿಯು ಹೇಳಿದೆ.

ಲಾಸ್ಟ್‌ ಮೈಲ್ ಏಜೆಂಟ್ಸ್‌ ಕಾರ್ಯಕ್ರಮದ ಅಡಿಯಲ್ಲಿ 50 ಸಾವಿರ ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ತಿಳಿಸಿದೆ.

ADVERTISEMENT

ಹಬ್ಬದ ಋತುವಿನಲ್ಲಿ ಪಾರ್ಸಲ್‌ ಮತ್ತು ಎಕ್ಸ್‌ಪ್ರೆಸ್‌ ಪಾರ್ಟ್‌–ಟ್ರಕ್‌ ಲೋಡ್‌ ವಹಿವಾಟಿನ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.