ADVERTISEMENT

ನೇರ ತೆರಿಗೆ ಸಂಗ್ರಹ ಏರಿಕೆ

ಪಿಟಿಐ
Published 18 ಸೆಪ್ಟೆಂಬರ್ 2022, 15:29 IST
Last Updated 18 ಸೆಪ್ಟೆಂಬರ್ 2022, 15:29 IST

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆಪ್ಟೆಂಬರ್ 17ರವರೆಗೆ ನೇರ ತೆರಿಗೆ ಸಂಗ್ರಹವು ಒಟ್ಟು ಶೇಕಡ 30ರಷ್ಟು ಹೆಚ್ಚಾಗಿದ್ದು, ₹ 8.36 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ.

‘ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 6.42 ಲಕ್ಷ ಕೋಟಿಯಷ್ಟು ನೇರ ತೆರಿಗೆ ಸಂಗ್ರಹ ಆಗಿತ್ತು’ ಎಂದು ಸಚಿವಾಲಯ ಹೇಳಿದೆ.

ಒಟ್ಟು ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಟ್ ಆದಾಯ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ ಹಾಗೂ ಷೇರು ವಹಿವಾಟಿಗೆ ವಿಧಿಸುವ ತೆರಿಗೆ ಸೇರಿದೆ.

ADVERTISEMENT

ರೀಫಂಡ್‌ ಮೂಲಕ ವಾಪಸ್ ಕೊಡಬೇಕಿರುವ ಮೊತ್ತವನ್ನು ಪರಿಗಣಿಸಿದರೆ ನೇರ ತೆರಿಗೆ ಸಂಗ್ರಹವು ₹ 7 ಲಕ್ಷ ಕೋಟಿ ಆಗಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ₹ 5.68 ಲಕ್ಷ ಕೋಟಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.