ADVERTISEMENT

ದೇವೀಸ್ ಲ್ಯಾಬೊರೇಟರೀಸ್ ಲಾಭ ಶೇ 13ರಷ್ಟು ಹೆಚ್ಚಳ

ಪಿಟಿಐ
Published 7 ಆಗಸ್ಟ್ 2021, 11:20 IST
Last Updated 7 ಆಗಸ್ಟ್ 2021, 11:20 IST

ನವದೆಹಲಿ: ಔಷಧ ತಯಾರಿಕಾ ಕಂಪನಿ ಆಗಿರುವ ದೇವೀಸ್ ಲ್ಯಾಬೊರೇಟರೀಸ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 557 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಗಳಿಸಿದ್ದ ₹ 492 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಲಾಭದಲ್ಲಿ ಶೇ 13ರಷ್ಟು ಏರಿಕೆ ಕಂಡಿದೆ. ಕಂಪನಿಯ ಒಟ್ಟು ವರಮಾನವು ₹ 1,748 ಕೋಟಿಗಳಿಂದ ₹ 1,997 ಕೋಟಿಗಳಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT