ಕೋಲ್ಕತ್ತ: ಸಿದ್ಧ ಉಡುಪು ತಯಾರಿಸುವ ಪ್ರಮುಖ ಕಂಪನಿಯಾಗಿರುವ ಡಾಲರ್ ಇಂಡಸ್ಟ್ರೀಸ್ ಲಿಮಿಟೆಡ್, 2020ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ₹ 59.45 ಕೋಟಿ ನಿವ್ವಳ ಲಾಭ ಗಳಿಸಿದ್ದು ಶೇ 21ರಷ್ಟು ಇಳಿಕೆ ಕಂಡಿದೆ.
ಹಣಕಾಸು ವರ್ಷದಲ್ಲಿನ ವರಮಾನವು ₹ 969.32 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ₹ 1028.76 ಕೋಟಿ ವರಮಾನಕ್ಕೆ ಹೋಲಿಸಿದರೆ ಶೇ 5.78 ಇಳಿಕೆ ಕಂಡಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ₹ 13.32 ಕೋಟಿ ಮೊತ್ತದ ನಿವ್ವಳ ಲಾಭ ಗಳಿಸಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಲಾಭಕ್ಕೆ ಹೋಲಿಸಿದರೆ ಶೇ 41ರಷ್ಟು ಇಳಿಕೆ ದಾಖಲಿಸಿದೆ.
‘ಕೊರೊನಾ ಪಿಡುಗು, ಕಂಪನಿಯ ನಾಲ್ಕನೇ ತ್ರೈಮಾಸಿಕದ ಹಣಕಾಸು ಸಾಧನೆ ಮೇಲೆ ವ್ಯತಿತಿಕ್ತ ಪರಿಣಾಮ ಬೀರಿದೆ. ಸಿದ್ಧ ಉಡುಪು ತಯಾರಿಕಾ ಉದ್ದಿಮೆಯು ಶೀಘ್ರದಲ್ಲಿಯೇ ಚೇತರಿಕೆಯ ಹಾದಿಗೆ ಮರಳಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿನೋದ ಕುಮಾರ್ ಗುಪ್ತಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.