ADVERTISEMENT

‘ವಿಮೆ ಪ್ರೀಮಿಯಂ ಹೆಚ್ಚಿಸುವ ಬದಲಾವಣೆ ಬೇಡ’

ಪಿಟಿಐ
Published 18 ಮಾರ್ಚ್ 2021, 12:09 IST
Last Updated 18 ಮಾರ್ಚ್ 2021, 12:09 IST

ನವದೆಹಲಿ: ಚಾಲ್ತಿಯಲ್ಲಿರುವ ಆರೋಗ್ಯ ವಿಮೆಗಳ ಪ್ರೀಮಿಯಂ ಮೊತ್ತ ಹೆಚ್ಚಿಸುವಂತಹ ಯಾವುದೇ ಬದಲಾವಣೆಗೆ ಮುಂದಾಗದಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ. ವೈಯಕ್ತಿಕ ಅಪಘಾತ ಮತ್ತು ಪ್ರಯಾಣ ವಿಮೆಗಳಿಗೆ ಕೂಡ ಈ ಸೂಚನೆ ಅನ್ವಯ ಆಗುತ್ತದೆ.

ಪ್ರೀಮಿಯಂ ಮೊತ್ತದಲ್ಲಿ ಹೆಚ್ಚಳಕ್ಕೆ ಕಾರಣವಾಗುವ ರೀತಿಯಲ್ಲಿ, ಈಗಾಗಲೇ ನೀಡಿರುವ ಸವಲತ್ತುಗಳಲ್ಲಿ ಬದಲಾವಣೆ ತರಲು, ಈಗಾಗಲೇ ಇರುವ ವಿಮಾ ಉತ್ಪನ್ನಗಳ ಜೊತೆ ಹೆಚ್ಚುವರಿ ಸವಲತ್ತು ನೀಡಲು ವಿಮಾ ಕಂಪನಿಗಳಿಗೆ ಅವಕಾಶ ಇಲ್ಲ ಎಂದು ಐಆರ್‌ಡಿಎಐ ಸುತ್ತೋಲೆ ಹೇಳಿದೆ. ವಿಮಾ ಕಂಪನಿಗಳು ನಿಯಮಗಳಿಗೆ ಅನುಗುಣವಾಗಿ ವಿಮೆಗಳಲ್ಲಿ ಸಣ್ಣ ಬದಲಾವಣೆ ತರಲು ಅವಕಾಶ ಹೊಂದಿವೆ.

‘ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸುವುದು ಅಥವಾ ಈಗಾಗಲೇ ನೀಡಿರುವ ಪ್ರಯೋಜನಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸವನ್ನು ಕಂಪನಿಗಳು ಮಾಡಬಹುದು. ಆದರೆ ಅವನ್ನು ಒಂದು ಆಯ್ಕೆಯಾಗಿ, ಅವಕ್ಕೆ ಪ್ರತ್ಯೇಕ ಪ್ರೀಮಿಯಂ ಪಡೆದು ಮಾಡಬೇಕು, ವಿಮೆ ಖರೀದಿಸುವವರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅವರು ಇಚ್ಛಿಸಿದಲ್ಲಿ ಮಾತ್ರ ಅಂತಹ ಸೌಲಭ್ಯ ನೀಡಬೇಕು’ ಎಂದು ಪ್ರಾಧಿಕಾರವು ತಾಕೀತು ಮಾಡಿದೆ.

ADVERTISEMENT

ವಿಮೆಯಲ್ಲಿ ಬಳಕೆ ಮಾಡುವ ಪದಗಳು ಆದಷ್ಟು ಸರಳವಾಗಿರುವಂತೆ, ವಿಮೆ ಖರೀದಿಸುವವರಿಗೆ ಸುಲಭವಾಗಿ ಅರ್ಥವಾಗುವಂತೆ ಇರಬೇಕು ಎಂದು ಕೂಡ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.