ADVERTISEMENT

ಇ–ಕಾಮರ್ಸ್‌ ಕರಡು ನೀತಿ: ಆಕ್ಷೇಪ ಸಲ್ಲಿಸಲು ಅವಕಾಶ

ಪಿಟಿಐ
Published 18 ಜೂನ್ 2019, 19:11 IST
Last Updated 18 ಜೂನ್ 2019, 19:11 IST
   

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಇ–ಕಾಮರ್ಸ್‌ ಕರಡು ನೀತಿ ಬಗ್ಗೆ ಇ–ರಿಟೇಲ್ ಕಂಪನಿಗಳು ತಮ್ಮ ಆಕ್ಷೇಪಗಳನ್ನು 10 ದಿನಗಳಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್ ಹಾಗೂ ಇ–ಕಾಮರ್ಸ್‌ ಮತ್ತು ತಂತ್ರಜ್ಞಾನ ಉದ್ದಿಮೆಯ ಪ್ರತಿನಿಧಿಗಳ ಮಧ್ಯೆ ಇಲ್ಲಿ ಸಭೆ ನಡೆದ ನಂತರ ಈ ಸೂಚನೆ ನೀಡಲಾಗಿದೆ. ಕರಡು ನೀತಿಯನ್ನು ಸಮರ್ಪಕವಾಗಿ ರೂಪಿಸಿಲ್ಲ ಎಂದು ಉದ್ದಿಮೆಯ ಪ್ರತಿನಿಧಿಗಳು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಇ–ಕಾಮರ್ಸ್ ನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಸಭೆ ನಡೆದಿದೆ. ಕರಡು ನೀತಿಗೆ ಬಹುರಾಷ್ಟ್ರೀಯ ಕಂಪನಿಗಳೂ ಆಕ್ಷೇಪ ದಾಖಲಿಸಿದ್ದವು.

ADVERTISEMENT

ಇ–ಕಾಮರ್ಸ್‌ ಉದ್ದಿಮೆಯ ಪ್ರತಿಯೊಂದು ಕಳವಳವನ್ನು ಪರಿಗಣಿಸಲಾಗುವುದು. ಈ ಉದ್ದೇಶಕ್ಕೆ ತಮ್ಮೆಲ್ಲ ಅಹವಾಲುಗಳನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಗೆ ಸಲ್ಲಿಸಲು ಗೋಯಲ್‌ ಮನವಿ ಮಾಡಿಕೊಂಡಿದ್ದಾರೆ.

ದತ್ತಾಂಶ ಸಂಗ್ರಹ: ದತ್ತಾಂಶ ಸಂಗ್ರಹದ ಬಗ್ಗೆ ಭಾರತೀಯ ರಿಸರ್ವ್‌ಬ್ಯಾಂಕ್ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆಯೂ ಕಂಪನಿಗಳು ಕಳವಳ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.