ADVERTISEMENT

ಡಿಸೆಂಬರ್ 3ರಿಂದ ಮೀಶೊ ಐಪಿಒ

ಪಿಟಿಐ
Published 28 ನವೆಂಬರ್ 2025, 12:25 IST
Last Updated 28 ನವೆಂಬರ್ 2025, 12:25 IST
 ಮೀಶೊ
 ಮೀಶೊ   

ನವದೆಹಲಿ: ಇ–ಕಾಮರ್ಸ್ ವೇದಿಕೆ ಮೀಶೊ, ಸಾರ್ವಜನಿಕರಿಗೆ ಷೇರು ಮಾರಾಟ ಮಾಡುವ (ಐಪಿಒ) ಮೂಲಕ ₹5,421 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

ಪ್ರತಿ ಷೇರಿನ ಬೆಲೆಯನ್ನು ₹105ರಿಂದ ₹111ಕ್ಕೆ ನಿಗದಿಪಡಿಸಿದೆ. ಡಿಸೆಂಬರ್ 3ರಿಂದ 5ರವರೆಗೆ ಷೇರುಗಳಿಗೆ ಬಿಡ್ ಸಲ್ಲಿಕೆಗೆ ಅವಕಾಶ ಇರಲಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ. ಆರಂಭಿಕ ಹೂಡಿಕೆದಾರರು (ಆ್ಯಂಕರ್ ಇನ್‌ವೆಸ್ಟರ್ಸ್‌) ಡಿಸೆಂಬರ್ 2ರಂದು ಐಪಿಒಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ. ಆಫರ್ ಫಾರ್ ಸೇಲ್‌ (ಒಎಫ್‌ಎಸ್‌) ಮೂಲಕ 10.55 ಕೋಟಿ ಷೇರುಗಳನ್ನು ಮಾರಾಟ ಮಾಡಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT