ADVERTISEMENT

₹ 10 ಕೋಟಿಗಿಂತ ಹೆಚ್ಚಿನ ವಹಿವಾಟು: ಇ–ಇನ್‌ವಾಯ್ಸ್‌ ಕಡ್ಡಾಯ

ಪಿಟಿಐ
Published 2 ಆಗಸ್ಟ್ 2022, 16:07 IST
Last Updated 2 ಆಗಸ್ಟ್ 2022, 16:07 IST

ನವದೆಹಲಿ (ಪಿಟಿಐ): ವಾರ್ಷಿಕ ₹ 10 ಕೋಟಿಗಿಂತ ಹೆಚ್ಚಿನ ವಹಿವಾಟು ನಡೆಸುವ, ಜಿಎಸ್‌ಟಿ ಅಡಿ ನೋಂದಾಯಿತ ಆಗಿರುವ ವರ್ತಕರು, ಉದ್ದಿಮೆಗಳು ಬಿ2ಬಿ ವಹಿವಾಟುಗಳಿಗೆ ಇ–ಇನ್‌ವಾಯ್ಸ್‌ ಸೃಷ್ಟಿಸುವುದು ಅಕ್ಟೋಬರ್‌ 1ರಿಂದ ಕಡ್ಡಾಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಈಗಿರುವ ನಿಯಮಗಳ ಅನ್ವಯ ವಾರ್ಷಿಕ ₹ 20 ಕೋಟಿಗಿಂತ ಹೆಚ್ಚಿನ ವಹಿವಾಟು ಇರುವ ವರ್ತಕರು, ಉದ್ದಿಮೆಗಳು ಬಿ2ಬಿ ವಹಿವಾಟುಗಳಿಗೆ ಇ–ಇನ್‌ವಾಯ್ಸ್‌ ಕಡ್ಡಾಯವಾಗಿ ಸೃಷ್ಟಿಸಬೇಕಿದೆ.

ಮುಂದಿನ ದಿನಗಳಲ್ಲಿ ಇ–ಇನ್‌ವಾಯ್ಸ್‌ ಸೃಷ್ಟಿಸುವುದನ್ನು ₹ 5 ಕೋಟಿ ವಹಿವಾಟು ನಡೆಸುವ ವರ್ತಕರು, ಉದ್ದಿಮೆಗಳಿಗೂ ಕಡ್ಡಾಯ ಮಾಡುವ ಚಿಂತನೆ ಕೇಂದ್ರ ಸರ್ಕಾರಕ್ಕೆ ಇದೆ.

ADVERTISEMENT

ಕೇಂದ್ರದ ಕ್ರಮಗಳು ತೆರಿಗೆ ವರಮಾನದ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಎಂದು ಡೆಲಾಯ್ಟ್‌ ಇಂಡಿಯಾ ಪಾಲುದಾರ ಎಂ.ಎಸ್. ಮಣಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.