ADVERTISEMENT

ಇ–ಪ್ಯಾನ್‌ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ

ಪಿಟಿಐ
Published 29 ಮೇ 2020, 2:36 IST
Last Updated 29 ಮೇ 2020, 2:36 IST
ಇ–ಪ್ಯಾನ್‌ಗೆ ಚಾಲನೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್‌
ಇ–ಪ್ಯಾನ್‌ಗೆ ಚಾಲನೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್‌   

ನವದೆಹಲಿ: ಆಧಾರ್‌ ಮಾಹಿತಿ ನೀಡಿ ಆನ್‌ಲೈನ್‌ ಮೂಲಕ ತಕ್ಷಣವೇ ಉಚಿತವಾಗಿ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಪಡೆಯುವ ಸೇವೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಚಾಲನೆ ನೀಡಿದ್ದಾರೆ.

ಪ್ಯಾನ್‌ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಅರ್ಜಿ ನಮೂನೆಯಲ್ಲಿ ವಿಸ್ತೃತ ಮಾಹಿತಿ ತುಂಬಿ ಅದನ್ನು ಇಲಾಖೆಗೆ ಸಲ್ಲಿಸುವ ರಗಳೆ ತಪ್ಪಲಿದೆ. ತೆರಿಗೆ ಇಲಾಖೆಗೆ ತೆರಿಗೆ ಪಾವತಿದಾರರ ಮನೆ ವಿಳಾಸಕ್ಕೆ ಪ್ಯಾನ್‌ ತಲುಪಿಸುವ ಸಮಸ್ಯೆಯೂ ಇರುವುದಿಲ್ಲ.

ಪಡೆಯುವುದು ಹೇಗೆ?: ಆದಾಯ ತೆರಿಗೆ ಇಲಾಖೆಯ ಜಾಲತಾಣದಲ್ಲಿ ಆಧಾರ್‌ ಸಂಖ್ಯೆ ನೀಡಿದರೆ, ಆಧಾರ್‌ಗೆ ಜೋಡಣೆ ಆಗಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ. ಅದು ಖಾತರಿಯಾದ 10 ನಿಮಿಷಗಳ ಒಳಗಾಗಿ ಇ–ಪ್ಯಾನ್‌ ಸಿದ್ಧವಾಗುತ್ತದೆ. ಇದನ್ನು ಡೌನ್‌ ಲೋಡ್‌ ಮಾಡಿಕೊಳ್ಳಬಹುದಾಗಿದೆ. ಆಧಾರ್‌ ಜತೆ ಸಂಪರ್ಕಿಸಿರುವ ಇ–ಮೇಲ್‌ಗೂ ಇ–ಪ್ಯಾನ್‌ ಕಳುಹಿಸಲಾಗುವುದು.

ADVERTISEMENT

2020ರ ಫೆಬ್ರುವರಿ 12ರಂದು ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಇದುವರೆಗೆ ಇಂತಹ 6,77,680 ಇ–ಪ್ಯಾನ್‌ ವಿತರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.