ADVERTISEMENT

ಇಡಿಐ, ಆ್ಯಕ್ಸೆಂಚರ್ ಔದ್ಯಮಿಕ ಕೌಶಲ ತರಬೇತಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 14:22 IST
Last Updated 3 ಅಕ್ಟೋಬರ್ 2025, 14:22 IST
   

ಬೆಂಗಳೂರು: ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (ಇಡಿಐಐ) ಮತ್ತು ಆ್ಯಕ್ಸೆಂಚರ್ ಸಲ್ಯೂಷನ್ಸ್  ಕಂಪನಿ ಒಟ್ಟಾಗಿ ನಡೆಸುತ್ತಿರುವ, ಔದ್ಯಮಿಕ ಕೌಶಲ ತರಬೇತಿ ಒದಗಿಸುವ ಕಾರ್ಯಕ್ರಮವನ್ನು ಇನ್ನಷ್ಟು ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮವನ್ನು ವಿಸ್ತರಿಸುವ ಸಂದರ್ಭದಲ್ಲಿ ಯುವಕರು ಮತ್ತು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ, ವಿವಿಧ ರಾಜ್ಯ ಸರ್ಕಾರಗಳು, ಎನ್‌ಜಿಒಗಳು ಮತ್ತು ಉದ್ಯಮ ಸಂಘಟನೆಗಳ ಜೊತೆ ಪಾಲುದಾರಿಕೆ ಕೂಡ ಮಾಡಿಕೊಳ್ಳಲಾಗುತ್ತಿದೆ ಎಂದು ಇಡಿಐಐ ಮತ್ತು ಆ್ಯಕ್ಸೆಂಚರ್‌ ಸಲ್ಯೂಷನ್ಸ್‌ನ ಜಂಟಿ ಪ್ರಕಟಣೆ ತಿಳಿಸಿದೆ.

2024–25ರಲ್ಲಿ ನಡೆದ ಒಟ್ಟು 144 ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳಿಂದ 7,300ಕ್ಕೂ ಹೆಚ್ಚು ಮಂದಿಗೆ ಪ್ರಯೋಜನ ಆಗಿದೆ. 838 ಗುಂಪುಗಳು ಉದ್ಯಮ್‌ ಯೋಜನೆಯ ಅಡಿ ನೋಂದಾಯಿತವಾಗಿವೆ, 64 ಸ್ಥಳೀಯ ಆಹಾರ ಉದ್ಯಮಗಳು ಎಫ್‌ಎಸ್‌ಎಸ್‌ಎಐ ಪ್ರಮಾಣಪತ್ರದ ಮೂಲಕ ರಾಷ್ಟ್ರೀಯ ಸುರಕ್ಷತಾ ಮಾನದಂಡವನ್ನು ತಲುಪಿವೆ, 137 ಮಂದಿ ಉದ್ಯಮಿಗಳು ಡಿಜಿಟಲ್ ಪಾವತಿ ಸಾಧನಗಳ ಬಳಕೆ ಆರಂಭಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.