ADVERTISEMENT

ಸೆಪ್ಟೆಂಬರ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಅಡುಗೆ ಎಣ್ಣೆ ಆಮದು

ಪಿಟಿಐ
Published 13 ಅಕ್ಟೋಬರ್ 2021, 11:49 IST
Last Updated 13 ಅಕ್ಟೋಬರ್ 2021, 11:49 IST
ಖಾದ್ಯ ತೈಲ (ಸಾಂದರ್ಭಿಕ ಚಿತ್ರ)
ಖಾದ್ಯ ತೈಲ (ಸಾಂದರ್ಭಿಕ ಚಿತ್ರ)   

ನವದೆಹಲಿ: ಅಡುಗೆ ಎಣ್ಣೆ ಆಮದು ಸೆಪ್ಟೆಂಬರ್‌ನಲ್ಲಿ ಶೇಕಡ 63ರಷ್ಟು ಹೆಚ್ಚಾಗಿ ದಾಖಲೆಯ 16.98 ಲಕ್ಷ ಟನ್‌ಗೆ ಏರಿಕೆ ಆಗಿದೆ ಎಂದು ಸಾಲ್ವೆಂಟ್ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ತಿಳಿಸಿದೆ.

ತಾಳೆ ಎಣ್ಣೆ ಆಮದು ಪ್ರಮಾಣ ಹೆಚ್ಚಾಗಿರುವುದರಿಂದ ಸೆಪ್ಟೆಂಬರ್ ತಿಂಗಳ ಒಟ್ಟಾರೆ ಆಮದು ದಾಖಲೆ ಮಟ್ಟಕ್ಕೆ ತಲುಪಿದೆ ಎಂದು ಅದು ಹೇಳಿದೆ. ಈ ಹಿಂದೆ 2015ರ ಅಕ್ಟೋಬರ್‌ನಲ್ಲಿಅಡುಗೆ ಎಣ್ಣೆ ಆಮದು 16.51 ಲಕ್ಷ ಟನ್‌ ಆಗಿದ್ದು ಗರಿಷ್ಠ ಮಟ್ಟವಾಗಿತ್ತು.

ತಾಳೆ ಎಣ್ಣೆ ಆಮದು ಸೆಪ್ಟೆಂಬರ್‌ನಲ್ಲಿ 12.62 ಲಕ್ಷ ಟನ್‌ಗಳಷ್ಟು ಆಗಿದೆ. 1996ರಿಂದ ಭಾರತವು ತಾಳೆ ಎಣ್ಣೆ ಆಮದು ಮಾಡಿಕೊಳ್ಳಲು ಆರಂಭಿಸಿದ ಬಳಿಕ ತಿಂಗಳೊಂದರಲ್ಲಿ ಆಗಿರುವ ಗರಿಷ್ಠ ಪ್ರಮಾಣದ ಆಮದು ಇದಾಗಿದೆ ಎಂದು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ಹೇಳಿದ್ದಾರೆ.

ADVERTISEMENT

ಖಾದ್ಯ ತೈಲವಲ್ಲದ, ಇತರ ಎಣ್ಣೆಗಳ ಆಮದು 17,702 ಟನ್‌ಗಳಿಂದ 63,608 ಟನ್‌ಗಳಿಗೆ ಏರಿಕೆ ಆಗಿದೆ. 2020ರ ನವೆಂಬರ್‌ನಿಂದ 2021ರ ಸೆಪ್ಟೆಂಬರ್ ಅವಧಿಯಲ್ಲಿ ಅಡುಗೆ ಎಣ್ಣೆ ಆಮದು 1.19 ಕೋಟಿ ಟನ್‌ಗಳಿಂದ 1.20 ಕೋಟಿ ಟನ್‌ಗಳಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.