ADVERTISEMENT

ಅಡುಗೆ ಎಣ್ಣೆ ಆಮದು ಮೌಲ್ಯ ಶೇ 63ರಷ್ಟು ಹೆಚ್ಚಳ

ಪಿಟಿಐ
Published 16 ನವೆಂಬರ್ 2021, 12:51 IST
Last Updated 16 ನವೆಂಬರ್ 2021, 12:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಡುಗೆ ಎಣ್ಣೆ ಆಮದು ಮೌಲ್ಯವು 2020–21ರ ಮಾರುಕಟ್ಟೆ ವರ್ಷದಲ್ಲಿ ಶೇ 63ರಷ್ಟು ಹೆಚ್ಚಾಗಿದ್ದು ₹ 1.17 ಲಕ್ಷ ಕೋಟಿಗೆ ತಲುಪಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಹೇಳಿದೆ.

2019–20ರ ಮಾರುಕಟ್ಟೆ ವರ್ಷದಲ್ಲಿ ಆಮದು ಮೌಲ್ಯವು ₹ 71,625 ಕೋಟಿ ಇತ್ತು. ಆದರೆ, ಆಮದು ಪ್ರಮಾಣವು 131.75 ಲಕ್ಷ ಟನ್‌ಗಳಿಂದ 131.31 ಲಕ್ಷ ಟನ್‌ಗೆ ಅಲ್ಪ ಇಳಿಕೆ ಕಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಂಸ್ಕರಿಸಿದ ಎಣ್ಣೆ ಆಮದು 4.21 ಲಕ್ಷ ಟನ್‌ನಿಂದ 6.86 ಲಕ್ಷ ಟನ್‌ಗೆ ಏರಿಕೆ ಆಗಿದೆ. ಕಚ್ಚಾ ಎಣ್ಣೆ ಆಮದು ಪ್ರಮಾಣವು 127.54 ಲಕ್ಷ ಟನ್‌ನಿಂದ 124.45 ಲಕ್ಷ ಟನ್‌ಗೆ ಇಳಿಕೆ ಕಂಡಿದೆ.

ADVERTISEMENT

ಕಚ್ಚಾ ತಾಳೆ ಎಣ್ಣೆ ಮೇಲಿನ ಆಮದು ಸುಂಕ ಇಳಿಕೆ ಆಗಿರುವುದರಿಂದ 2020–21ರಲ್ಲಿ ತಾಳೆ ಎಣ್ಣೆ ಆಮದು 72.17 ಲಕ್ಷ ಟನ್‌ನಿಂದ 83.21 ಲಕ್ಷ ಟನ್‌ಗೆ ಏರಿಕೆ ಕಂಡಿದೆ. ಸೋಯಾ, ಸೂರ್ಯಕಾಂತಿ ಮತ್ತು ಇತರೆ ಎಣ್ಣೆಗಳ ಆಮದು ಇಳಿಕೆ ಆಗಿದೆ.

ಅಡುಗೆ ಎಣ್ಣೆಗಳ ದಾಸ್ತಾನು ಪ್ರಮಾಣವು ಅಕ್ಟೋಬರ್‌ 1ರ ಅಂತ್ಯಕ್ಕೆ 20.05 ಲಕ್ಷ ಟನ್‌ನಷ್ಟು ಇತ್ತು. ಇದು ನವೆಂಬರ್‌ 1ರ ಅಂತ್ಯಕ್ಕೆ 17.05 ಲಕ್ಷ ಟನ್‌ಗೆ ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.