ADVERTISEMENT

ಸಹಜೀವನಕ್ಕೆ ‘ಆಲಿವ್‌’

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 20:00 IST
Last Updated 23 ಜನವರಿ 2020, 20:00 IST
ಉದ್ದೇಶಿತ ಮನೆಯ ಮಾದರಿ
ಉದ್ದೇಶಿತ ಮನೆಯ ಮಾದರಿ   

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮ ಸಂಸ್ಥೆ ‘ಎಂಬಸಿ ಗ್ರೂಪ್‌’, ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯಗಳಿರುವವಸತಿ ವ್ಯವಸ್ಥೆ ಕಲ್ಪಿಸಲು ‘ಆಲಿವ್‌’ ಹೊಸ ಕಂಪನಿ ಪರಿಚಯಿಸುತ್ತಿದೆ ಎಂದು ಸಿಒಒ ಆದಿತ್ಯ ವಿರ್ವಾನಿ ತಿಳಿಸಿದರು.

2021ರ ವೇಳೆಗೆಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 15,000, ಚೆನ್ನೈ ಮತ್ತು ಪುಣೆಯಲ್ಲಿ 2,500 ಹಾಸಿಗೆ ಹೊಂದಿದ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಬಾಡಿಗೆ ಮನೆ, ಕೊಠಡಿ, ಪೇಯಿಂಗ್‌ ಗೆಸ್ಟ್‌ ಮಾದರಿಯ ವಸತಿ ವ್ಯವಸ್ಥೆಗೆ ಪರ್ಯಾಯವಾಗಿ ಸಹ ಜೀವನಕ್ಕಾಗಿ ಅಪಾರ್ಟ್‌ಮೆಂಟ್‌ ಮಾದರಿಯ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶೇ 75ರಷ್ಟು ಹೂಡಿಕೆಯನ್ನು ಬೆಂಗಳೂರು, ಚೆನ್ನೈ, ಪುಣೆಯಲ್ಲಿ ಮಾಡಲಾಗುವುದು. ಬೆಂಗಳೂರು ಭಾರತದ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಹೂಡಿಕೆಯ ಬಹುಪಾಲನ್ನು ಇಲ್ಲಿಯೇ ಮಾಡಲಾಗುತ್ತಿದೆ. ಸ್ಥಳೀಯ ಭೂಮಾಲೀಕರೊಂದಿಗೆ ಸಹಭಾಗಿತ್ವದ ಮೂಲಕ ಉದ್ಯಮವನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ADVERTISEMENT

ಒಂದು ಹಾಸಿಗೆಯ ಕೊಠಡಿಗೆ ₹ 10,000ದಿಂದ 12,000 ಬಾಡಿಗೆ ದರ ಇರಲಿದ್ದು, ಹತ್ತು ತಿಂಗಳ ಬಾಡಿಗೆ ಹಣವನ್ನು ಮುಂಗಡವಾಗಿ ಸ್ವೀಕರಿಸಲಾಗುವುದು. ಕೊಠಡಿಯ ವಿಸ್ತೀರ್ಣ ಹೆಚ್ಚಾದಂತೆ ದರವೂ ಹೆಚ್ಚಾಗಲಿದೆ. ಸಿನಿಮಾ, ಕ್ರೀಡಾಂಗಣ, ಅಡುಗೆ ಕೋಣೆ, ಗೇಮಿಂಗ್‌, ಸಂಗೀತ ಕೊಠಡಿ ಸೇರಿದಂತೆ ಎಲ್ಲ ಸೌಲಭ್ಯಗಳು ಇಲ್ಲಿ ಒದಗಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.