ADVERTISEMENT

Solar Company IPO: ಎಮ್ವೀ ಕಂಪನಿಯ ಐಪಿಒ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 15:50 IST
Last Updated 10 ನವೆಂಬರ್ 2025, 15:50 IST
<div class="paragraphs"><p>(ಪ್ರಾತಿನಿಧಿಕ ಚಿತ್ರ )&nbsp;</p></div>

(ಪ್ರಾತಿನಿಧಿಕ ಚಿತ್ರ ) 

   

ಬೆಂಗಳೂರು: ಎಮ್ವೀ ಫೋಟೊವೊಲ್ಟಾಯಿಕ್‌ ಕಂಪನಿಯು ಐಪಿಒ ಮೂಲಕ ಷೇರು ಮಾರಾಟ ಮಾಡಿ, ಬಂಡವಾಳ ಸಂಗ್ರಹಿಸಲು ಮುಂದಾಗಿದ್ದು, ಷೇರುಗಳಿಗೆ ಬಿಡ್‌ ಸಲ್ಲಿಸಲು ನವೆಂಬರ್‌ 11ರಿಂದ ಅವಕಾಶ ಇರಲಿದೆ.

ಬಿಡ್ ಸಲ್ಲಿಸಲು ನವೆಂಬರ್‌ 13 ಕಡೆಯ ದಿನವಾಗಿದೆ. ಸಣ್ಣ ಹೂಡಿಕೆದಾರರು ಕನಿಷ್ಠ 69 ಷೇರುಗಳಿಗೆ ಬಿಡ್ ಸಲ್ಲಿಸಬೇಕಾಗುತ್ತದೆ. ಷೇರು ಮಾರಾಟದ ಮೂಲಕ ಕಂಪನಿಯು ₹2,143 ಕೋಟಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಕಂಪನಿಯು ಸೋಲಾರ್‌ ಮಾಡ್ಯೂಲ್ ಹಾಗೂ ಸೌರಕೋಶಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.