ADVERTISEMENT

ಇಎಸ್‌ಐ: ಕೊಡುಗೆ ದರ ಕಡಿತ

ಪಿಟಿಐ
Published 13 ಜೂನ್ 2019, 20:24 IST
Last Updated 13 ಜೂನ್ 2019, 20:24 IST
   

ನವದೆಹಲಿ: ಆರೋಗ್ಯ ವಿಮೆ ಯೋಜನೆಗಾಗಿ ಉದ್ಯೋಗಿಗಳ ರಾಜ್ಯ ವಿಮೆ ನಿಗಮಕ್ಕೆ (ಇಎಸ್‌ಐಸಿ) ಮಾಲೀಕರು ಮತ್ತು ನೌಕರರು ನೀಡುವ ಕೊಡುಗೆಯ ದರವನ್ನು ಶೇ 6.5ರಿಂದ ಶೇ 4ಕ್ಕೆ ಇಳಿಸಲಾಗಿದೆ.

ಜುಲೈ 1ರಿಂದ ಜಾರಿಗೆ ಬರಲಿದೆ. ಉದ್ಯೋಗಿಗಳ ರಾಜ್ಯ ವಿಮೆಕಾಯ್ದೆಯಡಿ, ಮಾಲೀಕರ ಕೊಡುಗೆಯನ್ನು ಶೇ 4.75ರಿಂದ ಶೇ 3.25ಕ್ಕೆ ಮತ್ತು ಉದ್ಯೋಗಿಗಳ ಕೊಡುಗೆ ಶೇ1.75ರಿಂದ ಶೇ 0.75ಕ್ಕೆ ತಗ್ಗಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ 3.6 ಕೋಟಿ ಉದ್ಯೋಗಿಗಳು ಮತ್ತು 12.85 ಲಕ್ಷ ಮಾಲೀಕರಿಗೆ ಪ್ರಯೋಜನ ದೊರೆಯಲಿದೆ. ಉದ್ದಿಮೆ ಸಂಸ್ಥೆಗಳಿಗೆ ವರ್ಷಕ್ಕೆ ₹ 5 ಸಾವಿರ ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT