ADVERTISEMENT

ಯೆಸ್ ಬ್ಯಾಂಕ್ ಕಾಯಕಲ್ಪಕ್ಕೆ ಶೀಘ್ರ ಕ್ರಮ: ಎಸ್‌ಬಿಐ ಅಧ್ಯಕ್ಷ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 6:18 IST
Last Updated 7 ಮಾರ್ಚ್ 2020, 6:18 IST
   

ಮುಂಬೈ: ಯೆಸ್‌ ಬ್ಯಾಂಕ್ ಕಾಯಕಲ್ಪಕ್ಕೆ ಶೀಘ್ರ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್ ಶನಿವಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೆಸ್‌ ಬ್ಯಾಂಕ್‌ನ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧವಾಗಿದೆ.ಅದನ್ನು ಎಸ್‌ಬಿಐನ ಹೂಡಿಕೆ ಮತ್ತು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ ಎಂದರು.

‘ಕರಡು ಯೋಜನೆ ಪರಿಶೀಲಿಸಿದ ಹಲವರುಯೆಸ್‌ ಬ್ಯಾಂಕ್‌ನಲ್ಲಿ ಹೂಡಿಕೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ. ಯೆಸ್‌ ಬ್ಯಾಂಕ್‌ ಷೇರುದಾರರ ಹಿತ ಕಾಪಾಡಲೂ ಎಸ್‌ಬಿಐ ಬದ್ಧವಾಗಿದೆ’ ಎಂದು ಅವರು ಭರವಸೆ ನೀಡಿದರು.

ADVERTISEMENT

ಯೆಸ್‌ ಬ್ಯಾಂಕ್‌ನ ಸಿಬ್ಬಂದಿಯ ವೃತ್ತಿಪರತೆ ಬಗ್ಗೆ ಬ್ಯಾಂಕಿಂಗ್ ವಲಯದಲ್ಲಿ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಅವರಿಗೆ ಒಂದು ವರ್ಷದ ಉದ್ಯೋಗಭದ್ರತೆಯನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ರಿಸರ್ವ್‌ ಬ್ಯಾಂಕ್ ಶುಕ್ರವಾರ ಯೆಸ್‌ ಬ್ಯಾಂಕ್‌ನ ಪುನರುಜ್ಜೀವನಕ್ಕೆ ಕರಡು ಯೋಜನೆ ಪ್ರಕಟಿಸಿತ್ತು.

ದೇಶದ ಪ್ರಮುಖ ಬ್ಯಾಂಕ್‌ ಒಂದು ಯೆಸ್‌ಬ್ಯಾಂಕ್‌ನಶೇ 49ರಷ್ಟು ಷೇರುಗಳನ್ನು ಖರೀದಿಸಲಿದೆ. ಬಂಡವಾಳ ಹೂಡಿಕೆಯ ನಂತರದ ಮೂರು ವರ್ಷಗಳ ಅವಧಿಯಲ್ಲಿ ಹೂಡಿಕೆಯನ್ನು ಶೇ 26ಕ್ಕಿಂತಲೂ ಕಡಿಮೆಯಾಗಲು ಅವಕಾಶವಿಲ್ಲ ಎಂದು ಆರ್‌ಬಿಐ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.