ADVERTISEMENT

ಇಥೆನಾಲ್ ಘಟಕ ವಿಸ್ತರಣೆ: ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:12 IST
Last Updated 27 ನವೆಂಬರ್ 2020, 21:12 IST
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್   

ಮುಧೋಳ (ಬಾಗಲಕೋಟೆ): ಇಲ್ಲಿನ ನಿರಾಣಿ ಸಕ್ಕರೆ ಕಾರ್ಖಾನೆಯ ಇಥೆನಾಲ್ ಘಟಕದ ವಿಸ್ತರಣೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ವರ್ಚುವಲ್ ಸಮಾರಂಭದ ಮೂಲಕ ಶುಕ್ರವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಆಧರಿತ ಕೈಗಾರಿಕೆಗಳ ಅಭಿವೃದ್ಧಿಗೆ ಬಹಳ ಆಸಕ್ತಿ ಹೊಂದಿದ್ದಾರೆ. ಕೃಷಿ ಆಧಾರಿತ ಕೈಗಾರಿಕೆ ಬೆಳೆಯುವುದರಿಂದ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ನಿರಾಣಿ ಉದ್ಯಮ ಸಮೂಹ ದೇಶದಲ್ಲಿಯೇ ಮೊದಲ ಬಾರಿಗೆ ತ್ಯಾಜ್ಯ ಬಳಸಿ ನೌಕಾ ಮತ್ತು ವಿಮಾನಯಾನಕ್ಕೆ ಉಪಯೋಗವಾಗುವ ಇಂಧನ ಮತ್ತುಸಿ.ಎನ್.ಜಿ ಉತ್ಪಾದನೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.

ADVERTISEMENT

ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಹೊಸ ಘಟಕ 500 ಮಂದಿಗೆ ಉದ್ಯೋಗ ಕಲ್ಪಿಸಲಿದೆ ಎಂದರು.

ರನ್ನ ಶುಗರ್ಸ್: ನಿರಾಣಿ ಸಮೂಹಕ್ಕೆ
ಮುಧೋಳ ತಾಲ್ಲೂಕಿನ ತಿಮ್ಮಾಪುರದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ನಡೆಸುವ ಜವಾಬ್ದಾರಿ ನಿರಾಣಿ ಸಮೂಹ ವಹಿಸಿಕೊಂಡಿದೆ. ಕಾರ್ಖಾನೆಯನ್ನು ಈ ಭಾಗದ ರೈತರು, ಜನಪ್ರತಿನಿಧಿಗಳು ತುಂಬಾ ಶ್ರಮವಹಿಸಿ ಕಟ್ಟಿದ್ದಾರೆ. ಅವರೆಲ್ಲರ ಆಶಯದಂತೆ ನಿರಾಣಿ ಸಮೂಹ ಕಾರ್ಯನಿರ್ವಹಿಸಲಿದೆ ಎಂದು ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.