ADVERTISEMENT

ರಫ್ತು ಶೇ 18ರಷ್ಟು ವೃದ್ಧಿ

ಪಿಟಿಐ
Published 16 ನವೆಂಬರ್ 2018, 17:53 IST
Last Updated 16 ನವೆಂಬರ್ 2018, 17:53 IST

ನವದೆಹಲಿ: ದೇಶದ ರಫ್ತು ವಹಿವಾಟು ಅಕ್ಟೋಬರ್‌ನಲ್ಲಿ ಶೇ 18ರಷ್ಟು ಹೆಚ್ಚಾಗಿದ್ದು, ₹ 1.94 ಲಕ್ಷ ಕೋಟಿಗೆ ತಲುಪಿದೆ. ಸೆಪ‍್ಟೆಂಬರ್‌ನಲ್ಲಿ ರಫ್ತು ವಹಿವಾಟು ಶೇ 2.15ಕ್ಕೆ ಇಳಿಕೆಯಾಗಿತ್ತು. ಆಮದು ವಹಿವಾಟು ಶೇ 17.62ರಷ್ಟು ಹೆಚ್ಚಳಗೊಂಡಿದ್ದು, ₹ 3.17 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಚಿನ್ನದ ಆಮದು ಶೇ 42.9ರಷ್ಟು ಇಳಿಕೆಯಾಗಿ ₹ 12,096 ಕೋಟಿಗೆ ತಲುಪಿದೆ. ಆದರೆ, ಆಮದು ಮತ್ತು ರಫ್ತು ವಹಿವಾಟಿನ ನಡುವಣ ಅಂತರವಾದವ್ಯಾಪಾರ ಕೊರತೆ ₹ 1.06 ಲಕ್ಷ ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT