ADVERTISEMENT

ಸತತ ಮೂರನೆಯ ತಿಂಗಳೂ ರಫ್ತು ಇಳಿಕೆ

ಪಿಟಿಐ
Published 15 ಮಾರ್ಚ್ 2023, 14:04 IST
Last Updated 15 ಮಾರ್ಚ್ 2023, 14:04 IST

ನವದೆಹಲಿ: ದೇಶದ ರಫ್ತುಗಳ ಮೊತ್ತವು ಫೆಬ್ರುವರಿಯಲ್ಲಿ ಶೇಕಡ 8.8ರಷ್ಟು ಇಳಿಕೆ ಕಂಡಿದ್ದು, ₹ 2.80 ಲಕ್ಷ ಕೋಟಿಗೆ ತಲುಪಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಬೇಡಿಕೆಗಳು ತಗ್ಗಿರುವುದು ಇದಕ್ಕೆ ಮುಖ್ಯ ಕಾರಣ. ಆದರೆ, ಫೆಬ್ರುವರಿಯಲ್ಲಿ ದೇಶದ ವ್ಯಾಪಾರ ಕೊರತೆ ಅಂತರವು ₹ 1.44 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ಫೆಬ್ರುವರಿಯಲ್ಲಿ ಆಮದು ಪ್ರಮಾಣ ಕೂಡ ಶೇ 8.21ರಷ್ಟು ಕಡಿಮೆ ಆಗಿದ್ದು, ₹ 4.24 ಲಕ್ಷ ಕೋಟಿಗೆ ತಲುಪಿದೆ. ದೇಶದ ರಫ್ತು ವಹಿವಾಟು ಇದೇ ಗತಿಯಲ್ಲಿ ಮುಂದುವರಿದರೆ, 2022–23ರಲ್ಲಿ ಅದು ₹ 62 ಲಕ್ಷ ಕೋಟಿಗಿಂತ ಹೆಚ್ಚಾಗಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ಥವಾಲ್ ಹೇಳಿದ್ದಾರೆ.

‘ಸೇವಾ ವಲಯದ ರಫ್ತು ಪ್ರಮಾಣವು ಬಹಳ ಚೆನ್ನಾಗಿದೆ. ವ್ಯಾಪಾರ ಕೊರತೆಯು ಕಡಿಮೆ ಆಗಿದೆ’ ಎಂದು ಅವರು ಹೇಳಿದ್ದಾರೆ. ಎಂಜಿನಿಯರಿಂಗ್ ಸರಕುಗಳು, ಮುತ್ತು ಮತ್ತು ಆಭರಣ, ಹತ್ತಿಯ ಕೆಲವು ಉತ್ಪನ್ನಗಳು, ಪ್ಲಾಸ್ಟಿಕ್‌ ರಫ್ತಿನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕುಸಿತ ಕಂಡುಬಂದಿದೆ.

ADVERTISEMENT

ಪೆಟ್ರೋಲಿಯಂ ಉತ್ಪನ್ನಗಳು, ರಾಸಾಯನಿಕಗಳು, ಫಾರ್ಮಾ ವಲಯದ ಉತ್ಪನ್ನಗಳು, ಎಲೆಕ್ಟ್ರಾನಿಕ್ ಸರಕುಗಳು, ಅಕ್ಕಿ, ಸಿದ್ಧ ಜವಳಿ ಉತ್ಪನ್ನಗಳ ರಫ್ತು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.