ADVERTISEMENT

ಚೇತರಿಕೆಯತ್ತ ರಫ್ತು ವಹಿವಾಟು: ಪೀಯೂಷ್‌ ಗೋಯಲ್‌

ಪಿಟಿಐ
Published 22 ಜೂನ್ 2020, 15:00 IST
Last Updated 22 ಜೂನ್ 2020, 15:00 IST
ಪೀಯೂಷ್‌ ಗೋಯಲ್
ಪೀಯೂಷ್‌ ಗೋಯಲ್   

ನವದೆಹಲಿ: ‘ದೇಶದ ರಫ್ತು ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

‘ಏಪ್ರಿಲ್‌ನಲ್ಲಿ ರಫ್ತು ಶೇ 60ರಷ್ಟು ಇಳಿಕೆ ಕಂಡಿತ್ತು. ಅದಕ್ಕೆ ಹೋಲಿಸಿದರೆ ಜೂನ್‌ನಲ್ಲಿ ಇದುವರೆಗೆ ಶೇ 10–12ರಷ್ಟು ಇಳಿಕೆಯಾಗಿದೆ. ಅಂದರೆ 2019ರ ಜೂನ್‌ನಲ್ಲಿದ್ದ ಮಟ್ಟದಲ್ಲಿ ಶೇ 88–90ರಷ್ಟು ತಲುಪಿದ್ದೇವೆ. ಜೂನ್‌ ತಿಂಗಳ ಮೂರನೇ ವಾರದ ಅಂಕಿ–ಅಂಶ ಹೊರಬಂದ ಮೇಲೆ ಇನ್ನೂ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಅವರು ಸಿಐಐ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

‘ಸುಸ್ಥಿರ ಪ್ರಗತಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸದಾ ಸಬ್ಸಿಡಿಯ ಮೇಲೆ ಅವಲಂಬಿಸುವುದು ಉತ್ತಮವಲ್ಲ’ ಎಂದಿದ್ದಾರೆ.

ADVERTISEMENT

ಎಫ್‌ಡಿಐ ಕುರಿತು ಮಾತನಾಡಿದ ಅವರು, ‘ಬಹುತೇಕ ಎಲ್ಲಾ ವಲಯಗಳೂ ಎಫ್‌ಡಿಐಗೆ ಮುಕ್ತವಾಗಿವೆ. ಆದರೆ, ಅವಕಾಶವಾದಿ ಉದ್ದೇಶದ ಬಂಡವಾಳ ಹೂಡಿಕೆಯನ್ನು ತಡೆಯುವ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ದೇಶದ ಬೆಳವಣಿಗೆಗೆ ಪೂರಕವಲ್ಲದ ಹೂಡಿಕೆ ಆಗದಂತೆ ನೋಡಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.