ADVERTISEMENT

ಡಿಸೆಂಬರ್‌ನಲ್ಲಿ ದಾಖಲೆಯ ರಫ್ತು

ಪಿಟಿಐ
Published 3 ಜನವರಿ 2022, 19:30 IST
Last Updated 3 ಜನವರಿ 2022, 19:30 IST

ನವದೆಹಲಿ: ಡಿಸೆಂಬರ್ ತಿಂಗಳಿನಲ್ಲಿ ದೇಶದ ರಫ್ತು ಪ್ರಮಾಣವು ಶೇಕಡ 37ರಷ್ಟು ಹೆಚ್ಚಾಗಿದ್ದು, ₹ 2.77 ಲಕ್ಷ ಕೋಟಿಗೆ ತಲುಪಿದೆ. ಇದು ಒಂದು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಗರಿಷ್ಠ ಮೊತ್ತ.

ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ರಫ್ತಿನ ಮೊತ್ತವು ₹ 22 ಲಕ್ಷ ಕೋಟಿಯ ಗಡಿಯನ್ನು ದಾಟಿದೆ. ಇದು 2020–21ನೆಯ ಸಾಲಿನ ಇದೇ ಅವಧಿಯಲ್ಲಿನ ರಫ್ತು ಪ್ರಮಾಣಕ್ಕಿಂತ ಅಧಿಕ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ–ಅಂಶಗಳು ಹೇಳಿವೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಣಿಜ್ಯ ಸಚಿವ ಪೀಯೂಷ್ ಗೋಯಲ್, ಪ್ರಸಕ್ತ ಹಣಕಾಸು ವರ್ಷದಲ್ಲಿ ರಫ್ತಿನ ಮೊತ್ತವು ₹ 29 ಲಕ್ಷ ಕೋಟಿಯನ್ನು ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.