ADVERTISEMENT

ಅಕ್ಟೋಬರ್‌: ರಫ್ತು ಶೇ 40ರಷ್ಟು ಹೆಚ್ಚಳ

ಪಿಟಿಐ
Published 18 ಅಕ್ಟೋಬರ್ 2021, 14:16 IST
Last Updated 18 ಅಕ್ಟೋಬರ್ 2021, 14:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ರಫ್ತು ವಹಿವಾಟು ಅಕ್ಟೋಬರ್‌ 1ರಿಂದ 14ರವರೆಗಿನ ಅವಧಿಯಲ್ಲಿ ಶೇಕಡ 40.5ರಷ್ಟು ಹೆಚ್ಚಳ ಆಗಿದ್ದು, ₹ 1.14 ಲಕ್ಷ ಕೋಟಿಗೆ ತಲುಪಿದೆ.

ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್‌ ಮತ್ತು ಔಷಧ ವಲಯಗಳ ಉತ್ತಮ ಬೆಳವಣಿಗೆಯಿಂದ ರಫ್ತು ವಹಿವಾಟು ಈ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಪ್ರಾಥಮಿಕ ಮಾಹಿತಿ ನೀಡಿದೆ.

ಈ ಅವಧಿಯಲ್ಲಿ ಆಮದು ವಹಿವಾಟು ಶೇ 60.72ರಷ್ಟು ಹೆಚ್ಚಾಗಿ ₹ 1.11 ಲಕ್ಷ ಕೋಟಿ ಆಗಿದೆ.2020ರ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಗೆ ಹೋಲಿಸಿದರೆ 2021ರ ಇದೇ ಅವಧಿಯಲ್ಲಿರಫ್ತು ವಹಿವಾಟು ಶೇ 57.53ರಷ್ಟು ಹೆಚ್ಚಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.