ADVERTISEMENT

ಕೃಷಿ ವಲಯದ ಪ್ರಗತಿ ಶೇ 3.1ರಷ್ಟು ಸಾಧ್ಯತೆ

ಪಿಟಿಐ
Published 16 ಜನವರಿ 2020, 13:56 IST
Last Updated 16 ಜನವರಿ 2020, 13:56 IST

ನವದೆಹಲಿ: ದೇಶದ ಕೃಷಿ ವಲಯವು 2019–20ರಲ್ಲಿ ಶೇ 3.1ರಷ್ಟು ಪ್ರಗತಿ ಕಾಣುವ ಸಾಧ್ಯತೆ ಎಂದು ಕೇಂದ್ರ ಸರ್ಕಾರದ ಚಿಂತಕರ ಚಾವಡಿಯಾಗಿರುವ ನೀತಿ ಆಯೋಗದ ಸದಸ್ಯ ರಮೇಶ್‌ ಚಾಂದ್‌ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಖಾಸಗಿ ವಲಯದ ದೊಡ್ಡ ಮಟ್ಟದ ಪಾಲ್ಗೊಳ್ಳುವಿಕೆ ಇಲ್ಲದೆ ಕೃಷಿ ಕ್ಷೇತ್ರದಲ್ಲಿ ಭಾರಿ ಬದಲಾವಣೆ ನಿರೀಕ್ಷಿಸುವಂತಿಲ್ಲ. ಸಾಂಪ್ರದಾಯಿಕ ಕೃಷಿಯಿಂದ ಆಧುನಿಕತೆಯತ್ತ ತ್ವರಿತವಾಗಿ ಬದಲಾಗಲು ಖಾಸಗಿ ಬಂಡವಾಳ ಹೂಡಿಕೆಯ ಅಗತ್ಯ ಇದೆ. ಕಾರ್ಪೊರೇಟ್‌ ವಲಯದ ಹೂಡಿಕೆ ಮತ್ತು ಭಾಗವಹಿಸುವಿಕೆ ಇಲ್ಲದೆ ಕೃಷಿಕರ ಆದಾಯ ದುಪ್ಪಟ್ಟುಗೊಳಿಸುವುದು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

2018–19ರಲ್ಲಿ ಕೃಷಿ ವಲಯದ ಒಟ್ಟಾರೆ ಬೆಳವಣಿಗೆಯು ಶೇ 2.9ರಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ಮತ್ತು ದ್ವಿತೀಯ ತ್ರೈಮಾಸಿಕಗಳಲ್ಲಿ ಕ್ರಮವಾಗಿ ಶೇ 2 ಮತ್ತು ಶೇ 2.1ರಷ್ಟು ಪ್ರಗತಿ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.