ADVERTISEMENT

ಫೆಡರಲ್ ಬ್ಯಾಂಕ್ ಲಾಭ ಇಳಿಕೆ

ಪಿಟಿಐ
Published 2 ಆಗಸ್ಟ್ 2025, 14:24 IST
Last Updated 2 ಆಗಸ್ಟ್ 2025, 14:24 IST
   

ಮುಂಬೈ: ಫೆಡರಲ್‌ ಬ್ಯಾಂಕ್‌ನ ನಿವ್ವಳ ಲಾಭವು ಜೂನ್‌ ತ್ರೈಮಾಸಿಕದಲ್ಲಿ ಶೇ 15ರಷ್ಟು ಕಡಿಮೆ ಆಗಿದ್ದು, ₹862 ಕೋಟಿಗೆ ತಲುಪಿದೆ. ವಸೂಲಾಗದ ಸಾಲದ ಪ್ರಮಾಣದಲ್ಲಿನ ಏರಿಕೆಯಿಂದಾಗಿ, ಸಂಭಾವ್ಯ ನಷ್ಟವನ್ನು ನಿಭಾಯಿಸಲು ತೆಗೆದಿರಿಸಬೇಕಾದ ಮೊತ್ತ ಹೆಚ್ಚಾಗಿದೆ. ಇದು ಲಾಭದ ಪ್ರಮಾಣ ತಗ್ಗಲು ಒಂದು ಕಾರಣವಾಗಿದೆ.

ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸಾಲ ನೀಡಿಕೆಯು ಹೆಚ್ಚಲಿದೆ ಎಂದು ಬ್ಯಾಂಕ್ ಅಂದಾಜು ಮಾಡಿದೆ. ಅಲ್ಲದೆ, ನಿವ್ವಳ ಬಡ್ಡಿ ವರಮಾನದ ಪ್ರಮಾಣ ಹೆಚ್ಚಬಹುದು ಎಂಬ ನಿರೀಕ್ಷೆಯೂ ಅದಕ್ಕೆ ಇದೆ. ಕಿರುಸಾಲ ವಲಯದಲ್ಲಿನ ಸಮಸ್ಯೆಯು ಎಲ್ಲೆಡೆ ಕಂಡುಬರುತ್ತಿದ್ದು, ಇದು ಕೂಡ ಎನ್‌ಪಿಎ ಪ್ರಮಾಣ ಹೆಚ್ಚಾಗಲು ಕಾರಣ ಎಂದುಹೇಳಿದೆ.

ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸಾಲ ನೀಡಿಕೆ ಪ್ರಮಾಣವು ಶೇ 12–13ರ ಮಟ್ಟವನ್ನು ತಲುಪಲಿದೆ ಎಂದು ಬ್ಯಾಂಕ್‌ನ ಸಿಇಒ ಕೆ.ವಿ.ಎಸ್. ಮಣಿಯನ್ ಹೇಳಿದ್ದಾರೆ. ಸಂಭಾವ್ಯ ನಷ್ಟವನ್ನು ನಿರ್ವಹಿಸಲು ಬ್ಯಾಂಕ್‌ ತೆಗೆದಿರಿಸುವ ಮೊತ್ತವು ಈ ಬಾರಿಯ ಜೂನ್‌ ತ್ರೈಮಾಸಿಕದಲ್ಲಿ ₹437 ಕೋಟಿಗೆ ಹೆಚ್ಚಳ ಕಂಡಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹173 ಕೋಟಿ ಆಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.