ADVERTISEMENT

ಎಫ್‌ಐಐ: ₹ 12,112 ಕೋಟಿ ಹೊರಹರಿವು

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 14:19 IST
Last Updated 25 ಜೂನ್ 2022, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಣದುಬ್ಬರ ಏರಿಕೆ ಮತ್ತು ಕೇಂದ್ರೀಯ ಬ್ಯಾಂಕ್‌ಗಳಿಂದ ಬಡ್ಡಿದರ ಹೆಚ್ಚಳದ ಪರಿಣಾಮವಾಗಿ ಭಾರತದಿಂದ ವಿದೇಶಿ ಸಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಹಿಂದಕ್ಕೆ ಪಡೆಯುವುದು ಹೆಚ್ಚಾಗುತ್ತಿದೆ. ಜೂನ್‌ 24ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 12,112 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಮೌಲ್ಯ ವೃದ್ಧಿಯಾಗುತ್ತಿರುವ ಜೊತೆಗೆ ಅಮೆರಿಕದ ಬಾಂಡ್ ಗಳಿಕೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಭಾರತದಿಂದ ಎಫ್‌ಐಐ ಹೊರಹರಿವು ಮುಂದುವರಿಸಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ವಾರದ ವಹಿವಾಟಿನಲ್ಲಿ ಬ್ಯಾರಲ್‌ಗೆ 9.69 ಡಾಲರ್‌ ಕಡಿಮೆ ಆಗಿದ್ದು, 111.27 ಡಾಲರ್‌ಗಳಿಂದ 120.96 ಡಾಲರ್‌ಗೆ ಇಳಿಕೆ ಆಗಿದೆ.

ADVERTISEMENT

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಪ್ರಮುಖ 10 ಕಂಪನಿಗಳ ನಷ್ಟವು ₹ 3.91 ಲಕ್ಷ ಕೋಟಿಗೂ ಹೆಚ್ಚಿಗೆ ಇದೆ. ಅತ್ಯಂತ ಮೌಲ್ಯಯುತ ಕಂಪನಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಇರುವ ರಿಲಯನ್ಸ್ ಕಂಪನಿಗೆ ₹ 84,352 ಕೋಟಿ ನಷ್ಟವಾಗಿದ್ದು, ಒಟ್ಟಾರೆ ಬಂಡವಾಳ ಮೌಲ್ಯ ₹ 16.91 ಲಕ್ಷ ಕೋಟಿಗೆ ತಲುಪಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ (ಟಿಸಿಎಸ್) ಮಾರುಕಟ್ಟೆ ಮೌಲ್ಯ ₹ 1.01 ಲಕ್ಷ ಕೋಟಿ ಕಡಿಮೆ ಆಗಿದ್ದು ಒಟ್ಟಾರೆ ಬಂಡವಾಳ ಮೌಲ್ಯ ₹ 12.04 ಲಕ್ಷ ಕೋಟಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.