ADVERTISEMENT

ಸಾಲ ಮರುಹೊಂದಾಣಿಕೆ: ತಜ್ಞರಿಂದ ಮಿಶ್ರ ಪ್ರತಿಕ್ರಿಯೆ

ಪಿಟಿಐ
Published 29 ಆಗಸ್ಟ್ 2020, 14:38 IST
Last Updated 29 ಆಗಸ್ಟ್ 2020, 14:38 IST

ಕೋಲ್ಕತ್ತ: ಆರ್‌ಬಿಐ ಘೋಷಿಸಿರುವ ಸಾಲ ಮರುಹೊಂದಾಣಿಕೆ ಕೊಡುಗೆಯ ಬಗ್ಗೆ ಹಣಕಾಸು ವಲಯದ ತಜ್ಞರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲ ಆಗಲಿದೆ ಎಂದು ಕೆಲವರು ಹೇಳಿದ್ದರೆ, ಯೋಜನೆಯ ಮಾರ್ಗಸೂಚಿಗಳು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ) ನಿರ್ಬಂಧಕವಾಗಿವೆ ಎಂದು ಇನ್ನೂ ಕೆಲವು ತಜ್ಞರು ವಿವರಿಸಿದ್ದಾರೆ.

ಆರ್‌ಬಿಐನ ಸಾಲ ಮರುಹೊಂದಾಣಿಕೆಯ ರೂಪುರೇಷೆಯಲ್ಲಿ ಹೊಟೇಲ್‌ ಮತ್ತು ಆಥಿತ್ಯ ವಲಯವು ಎಂಎಸ್‌ಎಂಇ ವ್ಯಾಪ್ತಿಯಲ್ಲಿದೆ ಎಂದು ಟೂರಿಸಂ ಫೈನಾನ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನಿರ್ಬನ್‌ ಚಕ್ರವರ್ತಿ ತಿಳಿಸಿದ್ದಾರೆ.

ADVERTISEMENT

ಹಣಕಾಸು ವರ್ಷದ ಮೂರು ಅಥವಾ ನಾಲ್ಕನೇ ತ್ರೈಮಾಸಿಕದಲ್ಲಿ ವಲಯವು ಪುಟಿದೇಳುವ ನಿರೀಕ್ಷೆ ಇದೆ ಎಂದೂ ಅವರು ಹೇಳಿದ್ದಾರೆ.

‘ಆರ್‌ಬಿಐನ ಕೊಡುಗೆಯು ಪರಿಮಿತಿಗೊಳಪಟ್ಟಿದ್ದು, ಕಾರ್ಯಸಾಧ್ಯವಾದ ಪರಿಹಾರವಲ್ಲ’ ಎಂದು ಎಸ್‌ಆರ್‌ಇಐ ಇನ್‌ಫ್ರಾಸ್ಟ್ರಕ್ಷರ್‌ ಫೈನಾನ್ಸ್‌ನ ಉಪಾಧ್ಯಕ್ಷ ಸುನಿಲ್‌ ಕನೋರಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.