ADVERTISEMENT

ವಿತ್ತೀಯ ಕೊರತೆ ₹ 4.32 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 17:52 IST
Last Updated 31 ಜುಲೈ 2019, 17:52 IST

ನವದೆಹಲಿ: ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಿತ್ತೀಯ ಕೊರತೆಯು ₹ 4.32 ಲಕ್ಷ ಕೋಟಿಗೆ ತಲುಪಿದೆ. ಇದು ಬಜೆಟ್‌ ಅಂದಾಜಿನ ಶೇ 61.4ರಷ್ಟಾಗಿದೆ.

ವರಮಾನ ಮತ್ತು ವೆಚ್ಚದ ನಡುವಣ ಅಂತರವಾದ ವಿತ್ತೀಯ ಕೊರತೆಯು 2019–20ನೇ ಹಣಕಾಸು ವರ್ಷಕ್ಕೆ ₹ 7.03 ಲಕ್ಷ ಕೋಟಿ ಇರುವ ಅಂದಾಜು ಮಾಡಲಾಗಿದೆ.

2018–19ನೇ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಶೇ 68.7ರಷ್ಟಿತ್ತು ಎಂದು ಮಹಾಲೇಖಪಾಲರ (ಸಿಜಿಎ) ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಕೇಂದ್ರ ಸರ್ಕಾರವು ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3ರಲ್ಲಿ ನಿಯಂತ್ರಿಸುವ ಗುರಿ ಹೊಂದಿದೆ.

ಐಐಎಫ್‌ಎಲ್‌ ಹೋಂ ಫೈನಾನ್ಸ್‌ ಸೌಲಭ್ಯ
ಬೆಂಗಳೂರು
: ಐಐಎಫ್‌ಎಲ್‌ ಹೋಂ ಫೈನಾನ್ಸ್‌, ಕಡಿಮೆ ಆದಾಯದವರಿಗೆ ₹ 2 ಲಕ್ಷದಿಂದ ₹ 20 ಲಕ್ಷದವರೆಗೆ ಗೃಹ ಸಾಲ ನೀಡುವ ‘ಸ್ವರಾಜ್‌’ ಯೋಜನೆ ಆರಂಭಿಸಿದೆ.

‘ದಾಖಲೆ ನೀಡಲು ಸಾಧ್ಯವಿಲ್ಲದ ಚಾಲಕರು, ಪ್ಲಂಬರ್‌ ಮತ್ತಿತರ ಅರೆ ಕೌಶಲ್ಯದ ವೃತ್ತಿ ನಿರತ ಕಡಿಮೆ ಆದಾಯದವರಿಗೆ ಸುಲಭವಾಗಿ ಸಾಲ ನೀಡಲಾಗುವುದು’ ಎಂದು ಸಂಸ್ಥೆಯ ಸಿಇಒ ಮೋನು ರತ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.