ADVERTISEMENT

ವಿತ್ತೀಯ ಕೊರತೆ ನಿಯಂತ್ರಣ: ಕೇಂದ್ರ ಸರ್ಕಾರಕ್ಕೆ ಸವಾಲು

ಪಿಟಿಐ
Published 13 ಜನವರಿ 2019, 18:57 IST
Last Updated 13 ಜನವರಿ 2019, 18:57 IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇ 3.3ರಲ್ಲಿ ನಿಯಂತ್ರಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್‌ಟಿ ವರಮಾನ ಸಂಗ್ರಹದಲ್ಲಿ ಇಳಿಕೆ, ವೆಚ್ಚದಲ್ಲಿ ಹೆಚ್ಚಳ ಮತ್ತು ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡಿರುವುದರಿಂದ ವಿತ್ತೀಯ ಕೊರತೆ ಮಿತಿ ಮೀರಲಿದೆ ಎಂದು ಹೇಳಿದ್ದಾರೆ.

ಸಾರ್ವತ್ರಿಕ ಚುನಾವಣೆಯು ಸಮೀಪದಲ್ಲೇ ಇರುವುದರಿಂದ ಮತದಾರರನ್ನು ಸೆಳೆಯಲು ಕೇಂದ್ರ ಸರ್ಕಾರ ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತಿದೆ. ಇದರಿಂದಾಗಿ ವಿತ್ತೀಯ ಕೊರತೆ ನಿಯಂತ್ರಣ ಇನ್ನಷ್ಟು ಕಠಿಣವಾಗಲಿದೆ.

ADVERTISEMENT

ವಿತ್ತೀಯ ಕೊರತೆ ಶೇ 3.5ಕ್ಕೆ ಏರಿಕೆಯಾಗಲಿದೆ ಎಂದು ಕೆಲವು ತಜ್ಞರು ಅಂದಾಜು ಮಾಡಿದ್ದಾರೆ. ನವೆಂಬರ್‌ ಅಂತ್ಯಕ್ಕೆ ವಿತ್ತೀಯ ಕೊರತೆ ಶೇ 114.8ಕ್ಕೆ ತಲುಪಿದೆ. ಇದು ಕಳೆದ ವರ್ಷ ದಾಖಲಾಗಿದ್ದ ಶೇ 112ಕ್ಕಿಂತಲೂ ತುಸು ಹೆಚ್ಚಿಗೆ ಇದೆ.‌ ಕೈಗಾರಿಕಾ ಪ್ರಗತಿ ನವೆಂಬರ್‌ನಲ್ಲಿ 17 ತಿಂಗಳ ಕನಿಷ್ಠ ಮಟ್ಟವಾದ ಶೇ 0.5ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.