ನವದೆಹಲಿ: ಫ್ಲಿಪ್ಕಾರ್ಟ್ ಇಂಡಿಯಾ ಕಂಪನಿಯು ತನ್ನ ಮಾತೃಸಂಸ್ಥೆ ವಾಲ್ಮಾರ್ಟ್ನಿಂದ ₹ 1,431 ಕೋಟಿ ಬಂಡವಾಳ ಸಂಗ್ರಹಿಸಿದೆ.
ವಾಲ್ಮಾರ್ಟ್ ಸಂಸ್ಥೆಯು ಪ್ರತಿ ಷೇರಿಗೆ ₹ 29,400ರಂತೆ ಫ್ಲಿಪ್ಕಾರ್ಟ್ ಇಂಡಿಯಾದ4.86 ಷೇರುಗಳನ್ನು ಖರೀದಿಸಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಸಲ್ಲಿಕೆಯಾಗಿರುವ ದಾಖಲೆಪತ್ರಗಳಲ್ಲಿ ಈ ಮಾಹಿತಿ ಇದೆ.
ಇ–ಕಾಮರ್ಸ್ ಕಂಪನಿಗಳಲ್ಲಿ ಎಫ್ಡಿಐ ಹೂಡಿಕೆಗೆ ಸಂಬಂಧಿಸಿದಂತೆ ದೇಶದಲ್ಲಿ ಫೆಬ್ರುವರಿ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅದಕ್ಕೂ ಮೊದಲೇ ವಾಲ್ಮಾರ್ಟ್ ಈ ಹೂಡಿಕೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.