ADVERTISEMENT

ಫಿಗೊ: ಎರಡು ಆಟೊಮ್ಯಾಟಿಕ್‌ ವೇರಿಯೆಂಟ್‌ ಬಿಡುಗಡೆ

ಪಿಟಿಐ
Published 22 ಜುಲೈ 2021, 11:43 IST
Last Updated 22 ಜುಲೈ 2021, 11:43 IST

ನವದೆಹಲಿ: ಫಿಗೊ ಹ್ಯಾಚ್‌ಬ್ಯಾಕ್‌ ಕಾರಿನ ಎರಡು ಆಟೊಮ್ಯಾಟಿಕ್‌ ವೇರಿಯಂಟ್‌ಗಳನ್ನು ಬಿಡುಗಡೆ ಮಾಡಿರುವುದಾಗಿ ಫೋರ್ಡ್‌ ಇಂಡಿಯಾ ಕಂಪನಿ ಗುರುವಾರ ತಿಳಿಸಿದೆ. ಇವುಗಳ ಎಕ್ಸ್‌ ಷೋರೂಂ ಬೆಲೆ ₹ 7.75 ಲಕ್ಷ ಮತ್ತು ₹ 8.2 ಲಕ್ಷ ಇದೆ.

ಟೈಟಾನಿಯಂ ಮತ್ತು ಟೈಟಾನಿಯಂ+ ಟ್ರಿಮ್ ಆಯ್ಕೆಗಳಲ್ಲಿ ಇವು ಲಭ್ಯವಿವೆ. ಹೊಸ ಫಿಗೊ ಎಟಿ ಮಾದರಿಯು 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ.

ಭಾರತದ ಗ್ರಾಹಕರಿಗೆ ಸೇವೆ ನೀಡಲು ಫೋರ್ಡ್‌ ಬದ್ಧವಾಗಿದ್ದು, ವಿಶ್ವದರ್ಜೆಯ ಆಟೊಮ್ಯಾಟಿಕ್‌ ತಂತ್ರಜ್ಞಾನವನ್ನು ಪರಿಚಯಿಸಲು ಹೆಮ್ಮೆ ಇದೆ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್‌ ರೈನಾ ಹೇಳಿದ್ದಾರೆ.

ADVERTISEMENT

ಎಎಂಟಿ ಆಯ್ಕೆಯಲ್ಲಿ ನಂಬಿಕೆ ಇರದ ಹಲವು ಗ್ರಾಹಕರಿಗೆ ಫಿಗೊ ಎಟಿ ಮಾದರಿಯು ಸೂಕ್ತವಾಗಲಿದೆ ಎನ್ನುವ ವಿಶ್ವಾಸವನ್ನು ಕಂಪನಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ರೇನ್‌ ಸೆನ್ಸಿಂಗ್‌ ವೈಪ್ಸ್‌, ಎಲೆಕ್ಟ್ರೋಕ್ರೋಮಿಕ್‌ ಐಆರ್‌ವಿಎಂ, 7 ಇಂಚಿನ ಟಚ್‌ಸ್ಕ್ರೀನ್‌ ಇನ್ಫೊಟೇನ್ಮೆಂಟ್‌ ಸಿಸ್ಟಂ, ಸೈಡ್‌ ಮತ್ತು ಕರ್ಟೈನ್‌ ಏರ್‌ಬ್ಯಾಗ್, ಸ್ಟ್ಯಾಂಡರ್ಡ್‌ ಡ್ಯುಯಲ್‌ ಏರ್‌ಬ್ಯಾಗ್‌, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.