ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಫೆಬ್ರುವರಿ 1ಕ್ಕೆ ಕೊನೆಗೊಂಡ ವಾರದಲ್ಲಿ ₹ 14,626 ಕೋಟಿ ಹೆಚ್ಚಾಗಿ ₹28.40 ಲಕ್ಷ ಕೋಟಿಗೆ ಏರಿಕೆಯಾಗಿದೆ.
ವಿದೇಶಿ ಕರೆನ್ಸಿಗಳ ಸಂಗ್ರಹದಲ್ಲಿ ಆಗಿರುವ ಹೆಚ್ಚಳದಿಂದ ದೇಶದ ಮೀಸಲು ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಹಿತಿ ನೀಡಿದೆ.
ಅದಕ್ಕೂ ಹಿಂದಿನ ವಾರದಲ್ಲಿ ₹ 28.25 ಲಕ್ಷ ಕೋಟಿಯಷ್ಟು ಮೀಸಲು ಸಂಗ್ರಹ ಇತ್ತು.
ಚಿನ್ನದ ಮೀಸಲು ಸಂಗ್ರಹ ₹ 5,431 ಕೋಟಿ ಹೆಚ್ಚಾಗಿ ₹ 1.63 ಲಕ್ಷ ಕೋಟಿಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.