ADVERTISEMENT

ವಿದೇಶಿ ವಿನಿಮಯ ಸಂಗ್ರಹ ಇಳಿಕೆ

ಪಿಟಿಐ
Published 22 ಡಿಸೆಂಬರ್ 2018, 18:57 IST
Last Updated 22 ಡಿಸೆಂಬರ್ 2018, 18:57 IST

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಡಿಸೆಂಬರ್‌ 14ಕ್ಕೆ ಕೊನೆಗೊಂಡ ವಾರದಲ್ಲಿ ₹ 4,298 ಕೋಟಿ ಕಡಿಮೆಯಾಗಿ ₹ 27.51 ಲಕ್ಷ ಕೋಟಿಗೆ ಇಳಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಇದಕ್ಕೂ ಹಿಂದಿನ ವಾರ ₹ 27.58 ಲಕ್ಷ ಕೋಟಿ ಇತ್ತು.

ವಿದೇಶಿ ಕರೆನ್ಸಿಗಳ ಸಂಗ್ರಹ₹ 4,417 ಕೋಟಿ ತಗ್ಗಿದ್ದು, ₹ 25.69 ಲಕ್ಷ ಕೋಟಿಗೆ ತಲುಪಿದೆ. ಚಿನ್ನದ ಮೀಸಲು ಸಂಗ್ರಹ ₹ 259 ಕೋಟಿ ಹೆಚ್ಚಾಗಿ ₹ 1.47 ಲಕ್ಷ ಕೋಟಿಗೆ ಏರಿಕೆಯಾಗಿದೆ.

ADVERTISEMENT

ಐಎಂಎಫ್‌ನಲ್ಲಿನ ಭಾರತದ ಕರೆನ್ಸಿ ಸಂಗ್ರಹ ₹ 21 ಸಾವಿರ ಕೋಟಿಯಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.