ADVERTISEMENT

ಎಫ್‌ಪಿಐ ಒಳಹರಿವು ಹೆಚ್ಚಳ

ಆರ್ಥಿಕತೆಯ ಚೇತರಿಕೆಗೆ ಸುಧಾರಣಾ ಕ್ರಮಗಳ ಜಾರಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 17:25 IST
Last Updated 3 ನವೆಂಬರ್ 2019, 17:25 IST

ನವದೆಹಲಿ: ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ (ಎಫ್‌ಪಿಐ)ಒಳಹರಿವು ಹೆಚ್ಚಾಗುತ್ತಿದೆ.

ಹೂಡಿಕೆದಾರರು ಅಕ್ಟೋಬರ್‌ ತಿಂಗಳಿನಲ್ಲಿ ₹ 16,464 ಕೋಟಿ ಬಂಡವಾಳ ತೊಡಗಿಸಿದ್ದಾರೆ.

ಅಕ್ಟೋಬರ್‌ 1 ರಿಂದ 31ರವರೆಗೆ ನಡೆದ ವಹಿವಾಟನಲ್ಲಿ ₹ 12,475 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ ₹ 3,989 ಕೋಟಿ ಮೌಲ್ಯದ ಸಾಲಪತ್ರಗಳನ್ನುಖರೀದಿಸಿದ್ದಾರೆ.

ADVERTISEMENT

ದೇಶಿ ಮತ್ತು ಜಾಗತಿಕ ಮಟ್ಟದಲ್ಲಿ ನಡೆದಿರುವ ಸಕಾರಾತ್ಮಕ ಬೆಳವಣಿಗೆಗಳಿಂದ ಬಂಡವಾಳ ಒಳಹರಿವು ಹೆಚ್ಚಾಗುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ₹ 6,557 ಕೋಟಿ ಮೌಲ್ಯದ ಷೇರುಗಳು ಮತ್ತು ಸಾಲಪತ್ರಗಳನ್ನು ಖರೀದಿಸಿದ್ದರು.

‘ಕಾರ್ಪೊರೇಟ್‌ ತೆರಿಗೆ ದರ ಕಡಿತ, ಸಿರಿವಂತರ ಮೇಲಿನ ಹೆಚ್ಚುವರಿ ಸರ್ಚಾರ್ಜ್‌ ಕೈಬಿಟ್ಟಿರುವುದು ಹಾಗೂ ಬ್ಯಾಂಕ್‌ಗಳಿಗೆ ಪುನರ್ಧನ ನೀಡಿಕೆಯಂತಹ ಕ್ರಮಗಳು ಹೂಡಿಕೆ ಚಟುವಟಿಕೆಯನ್ನು ಹೆಚ್ಚಾಗುವಂತೆ ಮಾಡುತ್ತಿವೆ’ ಎಂದು ಮಾರ್ನಿಂಗ್‌ಸ್ಟಾರ್‌ ಇನ್‌ವೆಸ್ಟ್‌ಮೆಂಟ್‌ ಅಡ್ವೈಸರ್‌ ಇಂಡಿಯಾದ ಹಿರಿಯ ವಿಶ್ಲೇಷಕ ಹಿಮಾಂಶು ಶ್ರೀವಾಸ್ತವ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಬಂಡವಾಳ ಒಳಹರಿವಿನ ಬಗ್ಗೆ ಈಗಲೇ ಸಂಭ್ರಮ ಪಡುವ ಅಗತ್ಯ ಇಲ್ಲ. ಏಕೆಂದರೆ ಆರ್ಥಿಕತೆಯು ಮಂದಗತಿಯ ಚಲನೆಯಿಂದ ಇನ್ನೂ ಹೊರಬಂದಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.