ADVERTISEMENT

ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌: ಹೂಡಿಕೆದಾರರಿಗೆ ₹ 3,303 ಕೋಟಿ ಹಿಂದಕ್ಕೆ

ಪಿಟಿಐ
Published 11 ಜುಲೈ 2021, 12:03 IST
Last Updated 11 ಜುಲೈ 2021, 12:03 IST

ನವದೆಹಲಿ: ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ ಕಂಪನಿ ಸ್ಥಗಿತಗೊಳಿಸಿದ ಆರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿದ್ದವರ ಒಟ್ಟು ₹ 3,303 ಕೋಟಿಯನ್ನು ಎಸ್‌ಬಿಐ ಫಂಡ್‌ ಮ್ಯಾನೇಜ್‌ಮೆಂಟ್‌ ಕಂಪನಿಯು ಸೋಮವಾರದಿಂದ ಹಿಂದಿರುಗಿಸಲಿದೆ.

ಈ ಮೊತ್ತವನ್ನು ಸೇರಿಸಿದರೆ ಹೂಡಿಕೆದಾರರಿಗೆ ಹಿಂದಿರುಗಿಸಿದ ಒಟ್ಟು ಮೊತ್ತವು ₹ 21,080 ಕೋಟಿ ಆಗಲಿದೆ. ಇದು 2020ರ ಏಪ್ರಿಲ್‌ 23ರಂದು ಕಂಪನಿಯು ನಿರ್ವಹಣೆ ಮಾಡುತ್ತಿದ್ದ ಒಟ್ಟು ಮೊತ್ತದ ಶೇಕಡ 84ರಷ್ಟು ಎಂದು ಫ್ರ್ಯಾಂಕ್ಲಿನ್‌ ಟೆಂ‍ಪಲ್‌ಟನ್‌ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಹಣವನ್ನು ಹೂಡಿಕೆದಾರರಿಗೆ ಮರಳಿಸುವ ಜವಾಬ್ದಾರಿಯನ್ನು ಎಸ್‌ಬಿಐ ಫಂಡ್‌ ಮ್ಯಾನೇಜ್‌ಮೆಂಟ್‌ ಕಂಪನಿಗೆ ಸುಪ್ರೀಂ ಕೋರ್ಟ್‌ ವಹಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.